Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಇಂದು

ಟೀಂ ಇಂಡಿಯಾ
ಲಾರ್ಡ್ಸ್: ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ದ್ವಿತೀಯ ಟೆಸ್ಟ್ ಆರಂಭವಾಗಲಿದೆ.

 
ಮೊದಲ ಟೆಸ್ಟ್ ಮಳೆಗೆ ಆಹುತಿಯಾಗಿದ್ದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು. ಅದರಲ್ಲೂ ಭಾರತ ಗೆಲ್ಲಬೇಕಾಗಿದ್ದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಭಾರತೀಯ ಅಭಿಮಾನಿಗಳು ನಿರಾಸೆಪಡುವಂತಾಯಿತು.

ಕಳೆದ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತ್ತು. ಹಾಗಿದ್ದರೂ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ವಿಫಲರಾಗಿದ್ದರು. ಇನ್ನು, ನಾಯಕ ಕೊಹ್ಲಿ ಫಾರ್ಮ್ ಕೂಡಾ ತಂಡಕ್ಕೆ ದೊಡ್ಡ ಕೊರತೆಯಾಗಿ ಕಾಣುತ್ತಿದೆ. ಆಲ್ ರೌಂಡರ್ ಆಗಿ ರವೀಂದ್ರ ಜಡೇಜಾ ಬ್ಯಾಟಿಂಗ್ ನಲ್ಲಿ ಮಿಂಚಿದ್ದರು. ಹೀಗಾಗಿ ಅವರೇ ಈ ಪಂದ್ಯದಲ್ಲೂ ಮುಂದುವರಿಯುವ ನಿರೀಕ್ಷೆಯಿದೆ. ಆದರೆ ಶ್ರಾದ್ಧೂಲ್ ಠಾಕೂರ್ ಗೆ ಗಾಯವಾಗಿರುವುದರಿಂದ ಅವರ ಸ್ಥಾನಕ್ಕೆ ಅಶ್ವಿನ್ ಇಲ್ಲವೇ ಇಶಾಂತ್ ಶರ್ಮಾ ಆಗಮನವಾಗಬಹುದು. ಉಳಿದಂತೆ ಹೆಚ್ಚಿನ ಬದಲಾವಣೆಯಿರದು. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ರಿಂದ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಟೆಸ್ಟ್ ಪಂದ್ಯದಿಂದ ಶಾರ್ದೂಲ್ ಠಾಕೂಟ್ ಔಟ್