Publish Date: Wed, 31 Jul 2019 (09:26 IST)
Updated Date: Wed, 31 Jul 2019 (09:30 IST)
ನವದೆಹಲಿ: ಎರಡು ತಿಂಗಳ ಕಾಲ ಭಾರತಿಯ ಸೇನೆ ಸೇರಿಕೊಂಡಿರುವ ಕ್ರಿಕೆಟಿಗ ಧೋನಿಗೆ ಇಂದಿನಿಂದ ನಿಜವಾದ ಕರ್ತವ್ಯ ಶುರುವಾಗಲಿದೆ.
ಇಂದಿನಿಂದ ಧೋನಿ ಕಾಶ್ಮೀರದಲ್ಲಿ ಗಸ್ತುಪಡೆಯಲ್ಲಿ ಕರ್ತವ್ಯ ಆರಂಭಿಸಲಿದ್ದಾರೆ. ಸೇನೆಯ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಹೊಂದಿರುವ ಧೋನಿ ಈಗಾಗಲೇ ಪ್ಯಾರಾಟ್ರೂಪರ್ ತರಬೇತಿ ಪಡೆದಿದ್ದು, ಹೆಲಿಕಾಪ್ಟರ್ ನಿಂಗ ಜಿಗಿಯುವಂತಹ ಸಾಹಸದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.
ಇದೀಗ ಕಾಶ್ಮೀರದಲ್ಲಿ ಇತರ ಯೋಧರಂತೆ ಕರ್ತವ್ಯಕ್ಕೆ ಹಾಜರಾಗಲಿರುವ ಧೋನಿ 15 ದಿನಗಳ ಕಾಲ ವಿಕ್ಟರ್ ಫೋರ್ಸ್ ನೊಂದಿಗೆ ಕೆಲಸ ಮಾಡಲಿದ್ದಾರೆ.