Publish Date: Wed, 31 Jul 2019 (09:23 IST)
Updated Date: Wed, 31 Jul 2019 (09:25 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ವಿಮಾನವೇರುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಕೋಚ್ ಹುದ್ದೆಗೆ ರವಿಶಾಸ್ತ್ರಿಗೆ ಬೆಂಬಲ ನೀಡಿದ ನಾಯಕ ವಿರಾಟ್ ಕೊಹ್ಲಿ ಹೇಳಿಕೆಗೆ ಹರ್ಷ ಭೋಗ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಹಲವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ನೇರವಾಗಿ ರವಿಶಾಸ್ತ್ರಿಯನ್ನೇ ಮತ್ತೆ ಆಯ್ಕೆ ಮಾಡಿದರೆ ನಮಗೆ ಸಂತಸವಾಗುತ್ತದೆ ಎಂದಿದ್ದರು. ಇದಕ್ಕೆ ಕಾಮೆಂಟೇಟರ್ ಭೋಗ್ಲೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
‘ಒಂದು ಪ್ರಶ್ನೆಗೆ ನೇರವಾಗಿ ಉತ್ತರ ಕೊಡಬೇಕು ನಿಜ. ಆದರೆ ಕೋಚ್ ಹುದ್ದೆ ಹಲವರು ಅರ್ಜಿ ಸಲ್ಲಿಸಿರುವಾಗ, ಆಯ್ಕೆ ಪ್ರಕ್ರಿಯೆ ನಡೆಯುತ್ತಿರಬೇಕಾದರೆ ವಿರಾಟ್ ಕೊಹ್ಲಿ ನೇರವಾಗಿ ಹೀಗೆ ಒಬ್ಬರ ಹೆಸರು ಹೇಳಬಾರದಿತ್ತು. ಅದರ ಬದಲು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದೇನಾದರೂ ಹೇಳಬಹುದಿತ್ತು’ ಎಂದು ಬೋಗ್ಲೆ ಕೊಹ್ಲಿ ಹೇಳಿದ್ದು ಸರಿಯಲ್ಲ ಎಂದಿದ್ದಾರೆ.