Publish Date: Fri, 26 Jul 2019 (09:25 IST)
Updated Date: Fri, 26 Jul 2019 (09:29 IST)
ಬೆಂಗಳೂರು: ಕ್ರಿಕೆಟ್ ಬಿಟ್ಟು ಎರಡು ತಿಂಗಳು ಕಾಲ ಸೇನೆ ಸೇರುವ ನಿರ್ಧಾರ ಮಾಡಿದ್ದ ಕ್ರಿಕೆಟಿಗ ಧೋನಿ ನುಡಿದಂತೇ ಸೇನೆ ಸೇರಿಕೊಂಡಿದ್ದಾರೆ.
ಸೇನೆಯ ಪ್ಯಾರಾಚ್ಯೂಟ್ ರೆಜಿಮೆಂಟ್ ನಲ್ಲಿ ಧೋನಿ ತರಬೇತಿ ಪಡೆಯುವ ನಿರೀಕ್ಷೆಯಿದೆ. ಬುಧವಾರದಿಂದ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜುಲೈ 31 ರಿಂದ ಆಗಸ್ಟ್ 15 ರವರೆಗೆ ಧೋನಿ ಕಾಶ್ಮೀರದಲ್ಲಿ ವಿಕ್ಟರ್ ಫೋರ್ಸ್ ನ ಭಾಗವಾಗಿ ಗಸ್ತು ಮತ್ತು ಕಾವಲು ಪಡೆಯ ಕೆಲಸ ಮಾಡುವ ಸಾಧ್ಯತೆಯಿದೆ.
2011 ರಲ್ಲಿ ಧೋನಿಗೆ ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಿ ಗೌರವಿಸಿತ್ತು. ಇದನ್ನು ಕೇವಲ ನಾಮಕಾಸ್ಥೆಗೆ ಇಟ್ಟುಕೊಳ್ಳದೇ ಧೋನಿ ಪ್ರಾಯೋಗಿಕವಾಗಿ ಸೇನೆಯೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ.