Publish Date: Thu, 23 Nov 2017 (10:45 IST)
Updated Date: Thu, 23 Nov 2017 (10:47 IST)
ನವದೆಹಲಿ: ಸದ್ಯಕ್ಕೆ ಕ್ರಿಕೆಟ್ ಆಡುವ ಕೆಲಸವಿಲ್ಲ. ಇನ್ನೊಂದೆಡೆ ಟೀಕಾಕಾರರು ಅವರ ನಿವೃತ್ತಿಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ರಗಳೆಗಳೆಲ್ಲಾ ಬದಿಗೊತ್ತಿ ಕೂಲ್ ಕ್ಯಾಪ್ಟನ್ ಸೇನೆ ಸೇರಿದ್ದಾರೆ.
ಸೇನೆಯ ಗೌರವಯುತ ಲೆಫ್ಟಿನೆಂಟ್ ಕರ್ನಲ್ ಧೋನಿ ಸೇನೆಯ ಸಮವಸ್ತ್ರ ಧರಿಸಿ ಶ್ರೀನಗರದ ಆರ್ಮಿ ಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಬೆರೆತು ಖುಷಿ ಪಟ್ಟಿದ್ದಾರೆ.
ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ಧೋನಿಗೆ ಬಿಡುವಿನ ಮಜಾ. ಈ ಬಿಡುವಿನ ವೇಳೆಯನ್ನು ಧೋನಿ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಇತ್ತೀಚೆಗೆ ಧೋನಿ ತಮ್ಮ ಪತ್ನಿ, ಪುತ್ರಿ ಜತೆಗೆ ರಜಾ ದಿನ ಕಳೆಯುತ್ತಿರುವ ಕೆಲವು ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Thu, 23 Nov 2017 (10:45 IST)
Updated Date: Thu, 23 Nov 2017 (10:47 IST)