ಕೋಲ್ಕೊತ್ತಾ: ಅದ್ಯಾಕೋ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅದೃಷ್ಟವೇ ನೆಟ್ಟಗಿಲ್ಲ. ದೇಶೀಯ ಟೂರ್ನಿ ಇರಲಿ, ರಾಷ್ಟ್ರೀಯ ತಂಡವಿರಲಿ, ಅವರಿಗೆ ಬ್ಯಾಟ್ ಮೇಲೆತ್ತಿ ಶತಕ ಸಂಭ್ರಮಾಚರಿಸುವ ಅದೃಷ್ಟವೇ ಕೂಡಿಬರುತ್ತಿಲ್ಲ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 190 ಕ್ಕೆ ಔಟಾಗಿ ದ್ವಿಶತಕ ಭಾರಿಸಿದ್ದೇ ಕೊನೆ. ಅದಾದ ಬಳಿಕ ರಾಹುಲ್ ಅದೆಷ್ಟೋ ಪಂದ್ಯಗಳನ್ನು ಆಡಿ ತಂಡಕ್ಕೆ ಉತ್ತಮ ಕೊಡುಗೆಯಿತ್ತರೂ ಶತಕ ಭಾರಿಸುವ ಅದೃಷ್ಟ ಕೂಡಿ ಬಂದಿಲ್ಲ.
ರಾಹುಲ್ ಗೆ ಈ ಬಗ್ಗೆ ಭಾರೀ ಬೇಸರವಿದೆಯಂತೆ. ಶತಕ ಭಾರಿಸದಿದ್ದರೂ ಚಿಂತೆಯಿಲ್ಲ, ತಂಡಕ್ಕೆ ಉತ್ತಮ ಆರಂಭ ಕೊಡುತ್ತಿದ್ದೇನಲ್ಲ ಎನ್ನುತ್ತಿದ್ದ ರಾಹುಲ್ ಗೆ ಈಗ ಅರ್ಧಶತಕಕ್ಕೆ ಪದೇ ಪದೇ ಔಟಾಗಿ ತಾವೊಬ್ಬ ಏವರೇಜ್ ಬ್ಯಾಟ್ಸ್ ಮನ್ ಸಾಲಿಗೆ ಸೇರುತ್ತಿರುವುದಕ್ಕೆ ಬೇಸರವಿದೆಯಂತೆ.
‘ಏಳೆಂಟು ಬಾರಿ ನನಗೆ ಹೀಗೇ ಆಗಿದೆ. ಆದರೆ ಒಂದಲ್ಲಾ ಒಂದು ದಿನ ಶತಕ ಭಾರಿಸಿಯೇ ತೀರುತ್ತೇನೆ. ಏನೇ ಆದರೂ ಮೊದಲ ಬಾಲ್ ನಲ್ಲೇ ಔಟ್ ಆಗುವುದಕ್ಕಿಂತ ಬೆಟರ್ ಇದು’ ರಾಹುಲ್ ಹೇಳಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಈ ಋತುವಿನಲ್ಲಿ ಒಂದು ರಣಜಿ ಪಂದ್ಯವಾಡಿದ್ದ ರಾಹುಲ್ ಅದರಲ್ಲೂ 90 ರ ಆಸುಪಾಸಿನಲ್ಲಿ ಔಟಾಗಿದ್ದರು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ