ಮುಂಬೈ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆದ ಕೋಲ್ಕೊತ್ತಾದ ಈಡನ್ ಗಾರ್ಡನ್ ಪಿಚ್ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಸ್ಪಿನ್ನರ್ ಗಳು ಒಂದೇ ಒಂದು ವಿಕೆಟ್ ಪಡೆಯದೆ ಈ ದಾಖಲೆಯಾಗಿತ್ತು ಈ ಪಂದ್ಯ.
ಇಷ್ಟರಮಟ್ಟಿಗೆ ಭಾರತದ ಪಿಚ್ ವೇಗಿಗಳ ಸ್ವರ್ಗವಾಗಿದ್ದು ಹೇಗೆ ಮತ್ತು ಯಾಕೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅದಕ್ಕೆಲ್ಲಾ ಕಾರಣ ಕೋಚ್ ರವಿಶಾಸ್ತ್ರಿ ಬಿಸಿಸಿಐಗೆ ನೀಡಿದ ಸೂಚನೆ ಎಂಬುದು ಗೊತ್ತಾಗಿದೆ.
ಮುಂಬರುವ ಆಫ್ರಿಕಾ ಸರಣಿಗೆ ಸಿದ್ಧಗೊಳ್ಳುವ ನಿಟ್ಟಿನಲ್ಲಿ ಶ್ರೀಲಂಕಾ ಸರಣಿಯನ್ನು ವೇದಿಕೆ ಮಾಡಿಕೊಂಡಿರುವ ಟೀಂ ಇಂಡಿಯಾ ಅಲ್ಲಿನ ವೇಗದ ಪಿಚ್ ಗಳಿಗೆ ಹೊಂದಿಕೊಳ್ಳಲು ಈಗಲೇ ವೇಗದ ಪಿಚ್ ಗಳಲ್ಲಿ ಆಡಿ ಅನುಭವ ಪಡೆಯುತ್ತಿದೆಯಂತೆ.
ವೇಗದ ಪಿಚ್ ಗಳಿಗೆ ಹೊಂದಿಕೊಳ್ಳಲು ಈಗಿನಿಂದಲೇ ತಯಾರಿ ನಡೆಸುವ ಉದ್ದೇಶದಿಂದ ರವಿಶಾಸ್ತ್ರಿ ಬಿಸಿಸಿಐಗೆ ಲಂಕಾ ವಿರುದ್ಧದ ಎಲ್ಲಾ ಟೆಸ್ಟ್ ಪಂದ್ಯಗಳಿಗೂ ವೇಗದ ಪಿಚ್ ನಿರ್ಮಿಸುವಂತೆ ಆದೇಶಿಸಿದ್ದಾರಂತೆ. ಹೀಗಾಗಿ ಮುಂದಿನ ಎರಡು ಟೆಸ್ಟ್ ಗಳಲ್ಲೂ ವೇಗಿಗಳದ್ದೇ ಮೇಲುಗೈಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ