Publish Date: Sunday, 09 August 2020 (12:17 IST)
Updated Date: Sunday, 09 August 2020 (12:19 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿಯಾಗಿರುತ್ತಾರೆ ಎಂದು ಎಲ್ಲರಿಗೂ ಗೊತ್ತು. ಆದರೆ ಧೋನಿ ಕೂಲ್ ಕ್ಯಾಪ್ಟನ್ ಎಂಬುದೇ ಎಲ್ಲರ ಅಭಿಪ್ರಾಯ.
‘ಕೊಹ್ಲಿ ಆಕ್ರಮಣಕಾರಿ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ಧೋನಿ ಕೂಡಾ ಆಕ್ರಮಣಕಾರಿ ಸ್ವಭಾವದವರೇ. ಆದರೆ ಕೊಹ್ಲಿ ರೀತಿ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ’ ಎಂದು ಮಾಜಿ ಆಯ್ಕೆಗಾರ ಗಗನ್ ಖೋಡಾ ಹೇಳಿದ್ದಾರೆ.
ಮೈದಾನದಲ್ಲಿ ಯಾವತ್ತೂ ಆಕ್ರಮಣಕಾರಿಯಾಗಿರುವುದೂ ಕೆಲಸಕ್ಕೆ ಬಾರದು. ನೀವು ಆಕ್ರಮಣಕಾರಿ ಮತ್ತು ಶಾಂತ ಎರಡೂ ಸ್ವಭಾವಗಳ ಸಮ್ಮಿಶ್ರವಾಗಿದ್ದರೇ ಯಶಸ್ವಿಯಾಗಲು ಸಾಧ್ಯ. ಧೋನಿ ಹಾಗೆಯೇ ಇದ್ದರು ಎಂದು ಗಗನ್ ಖೋಡಾ ಹೇಳಿದ್ದಾರೆ.