ದ್ವಿತೀಯ ಟೆಸ್ಟ್ ಗೆ ಭುವನೇಶ್ವರ್ ಕುಮಾರ್ ಹೊರಗಿಟ್ಟು ಇಶಾಂತ್ ಶರ್ಮಾಗೆ ಮಣೆ ಹಾಕಿದ್ದು ಯಾಕೆ ಗೊತ್ತಾ?

Webdunia
ಶನಿವಾರ, 13 ಜನವರಿ 2018 (13:40 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಅತಿಥೇಯರು ಮೊದಲು ಬ್ಯಾಟಿಂಗ್ ಆರಂಭಿಸಿದ್ದಾರೆ. ಆದರೆ ಭಾರತ ತಂಡದಲ್ಲಿ ಅಚ್ಚರಿಯೆಂಬಂತೆ ಕಳೆದ ಪಂದ್ಯದ ಹೀರೋ ಭುವನೇಶ್ವರ್ ಕುಮಾರ್ ರನ್ನು ಹೊರಗಿಡಲಾಗಿದೆ.
 

ಭುವನೇಶ್ವರ್ ಕುಮಾರ್ ರನ್ನು ಹೊರಗಿಟ್ಟು ಹಿರಿಯ ವೇಗಿ ಇಶಾಂತ್ ಶರ್ಮಾಗೆ ಮಣೆ ಹಾಕಲಾಗಿದೆ. ಇದಕ್ಕೆ ಕಾರಣ ಈ ಪಿಚ್ ನಲ್ಲಿರುವ ಬೌನ್ಸ್. ಇಶಾಂತ್ ನೀಳಕಾಯದವರಾಗಿರುವುದರಿಂದ ಅವರ ಬಾಲ್ ನಲ್ಲಿ ಬೌನ್ಸ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕೊಹ್ಲಿ  ಭುವನೇಶ್ವರ್ ರನ್ನು ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನೊಂದೆಡೆ ಕೆಎಲ್ ರಾಹುಲ್ ತಂಡಕ್ಕೆ ಬಂದಿರುವುದು ಕನ್ನಡಿಗರಿಗೆ ಸಂತಸ ಮೂಡಿಸಿದೆ. ಶಿಖರ್ ಧವನ್ ಸ್ಥಾನಕ್ಕೆ ರಾಹುಲ್ ಆಗಮನವಾಗಿದೆ. ವೃದ್ಧಿಮಾನ್ ಸಹಾ ಜಾಗದಲ್ಲಿ ವಿಕೆಟ್ ಕೀಪರ್ ಆಗಿ ಹಿರಿಯ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಗೆ ಅವಕಾಶ ನೀಡಲಾಗಿದೆ. ಈ ಬದಲಾವಣೆ ಎಷ್ಟು ಕ್ಲಿಕ್ ಆಗುತ್ತದೆ ಎಂದು ಸಮಯ ಕಳೆದಂತೆ ತಿಳಿದು ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಯಲ್ ಲೈಫ್ ಹೀರೋ: ಭಾರತದ ಮಾರುಕಟ್ಟೆಯಲ್ಲಿ ವಿಕಲಚೇತನ ವ್ಯಕ್ತಿಗೆ ನೆರವಾದ ಅಫ್ಘಾನ್ ಕ್ರಿಕೆಟಿಗ ರಹಮಾನುಲ್ಲಾ ಗುರ್ಬಾಜ್ Video

ಧಮಾಕಾ ಬ್ಯಾಟಿಂಗ್ ಮಾಡುವ ರಿಚಾ ಘೋಷ್ ರನ್ನು ಲೇಟ್ ಆಗಿ ಬ್ಯಾಟಿಂಗ್ ಗಿಳಿಸುವುದು ಯಾಕೆ: ರಿವೀಲ್ ಮಾಡಿದ ಹರ್ಮನ್

India vs Pak: ದೀಪ್ತಿ ಶರ್ಮಾ ಕೈಚಳಕಕ್ಕೆ ತತ್ತರಿಸಿದ ಪಾಕ್‌: ಟಿ20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ

IND vs AFG: ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾ, ಅಫ್ಘಾನಿಸ್ತಾನ ಪಂದ್ಯಕ್ಕೆ ಅಡ್ಡಿ

IND vs AFG: ಅಫ್ಘಾನಿಸ್ತಾನ ವಿರುದ್ಧ ಇಂದು ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಮುಂದಿನ ಸುದ್ದಿ
Show comments