Publish Date: Wed, 07 Sep 2022 (16:22 IST)
Updated Date: Wed, 07 Sep 2022 (16:24 IST)
ದುಬೈ: ಪಾಕಿಸ್ತಾನ ವಿರುದ್ಧ ಒಂದು ಕ್ಯಾಚ್ ಕೈ ಬಿಟ್ಟ ತಪ್ಪಿಗೆ ಟೀಂ ಇಂಡಿಯಾ ಯುವ ವೇಗಿ ಅರ್ಷ್ ದೀಪ್ ಸಿಂಗ್ ಜೀವನದಲ್ಲಿ ಮರೆಯಲಾಗದಷ್ಟು ಕಹಿ ನಿಂದನೆ ಎದುರಿಸಿದ್ದಾರೆ.
ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಂ ಬಸ್ ಏರುವ ವೇಳೆ ಭಾರತೀಯ ಅಭಿಮಾನಿಯೊಬ್ಬರು ಜೋರಾಗಿ ಕ್ಯಾಚ್ ಬಿಟ್ಟ ದ್ರೋಹಿ ಎಂದು ನಿಂದಿಸಿದ್ದಾರೆ.
ಇದನ್ನು ಕೇಳಿಸಿಕೊಂಡ ಅರ್ಷ್ ದೀಪ್ ಬಸ್ ಏರದೇ ಕ್ಷಣ ಕಾಲ ಆ ಅಭಿಮಾನಿಯತ್ತ ಗುರಾಯಿಸುತ್ತಾ ನಿಂತರು. ಬಳಿಕ ಬಸ್ ಏರಿದರು. ಆದರೆ ಇದನ್ನು ಕೇಳಿಸಿಕೊಂಡಿದ್ದ ಪತ್ರಕರ್ತರೊಬ್ಬರು ಆ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳನ್ನು ಅವರನ್ನು ಸಮಾಧಾನಿಸಬೇಕಾಯಿತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.