Publish Date: Wed, 07 Sep 2022 (10:20 IST)
Updated Date: Wed, 07 Sep 2022 (10:28 IST)
ಮುಂಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧವೂ ಸೋತ ಬಳಿಕ ಅಭಿಮಾನಿಗಳ ಆಕ್ರೋಶ ಮೇರೆ ಮೀರಿದೆ.
ಭಾರತ ತಂಡದ ಈ ಬರಗೆಟ್ಟ ಪ್ರದರ್ಶನಕ್ಕೆ ಐಪಿಎಲ್ ಕಾರಣ. ಆಟಗಾರರಿಗೆ ದೇಶಕ್ಕಿಂತ ಐಪಿಎಲ್ ಪರ ಆಡುವುದೇ ಹೆಚ್ಚಾಗಿದೆ. ಹೀಗಾಗಿ ಐಪಿಎಲ್ ನ್ನು ನಿಷೇಧ ಮಾಡಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಮತ್ತೆ ಕೆಲವರು ತಂಡದ ಕೆಟ್ಟ ಸಂಯೋಜನೆ ಬಗ್ಗೆ ಕಿಡಿ ಕಾರಿದ್ದು, ಪ್ರತಿಭಾವಂತರನ್ನು ಹೊರಗಿಟ್ಟು ಅರ್ಹತೆಯಿಲ್ಲದವರನ್ನು ತಂಡಕ್ಕೆ ಕರೆಸಿಕೊಂಡು ಯೋಜನೆಯಲ್ಲಿ ವಿಫಲಗೊಂಡಿರುವ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.