Publish Date: Wed, 07 Sep 2022 (09:10 IST)
Updated Date: Wed, 07 Sep 2022 (09:40 IST)
ದುಬೈ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದುರ್ವರ್ತನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.
ಭುವನೇಶ್ವರ್ ಕುಮಾರ್ ಕ್ಯಾಚ್ ಬಿಟ್ಟಾಗ ಸಿಟ್ಟಿನಿಂದ ಬಳಿ ಹೋದ ರೋಹಿತ್ ಬಾಲ್ ನ್ನು ಭುವಿ ಬಳಿ ಕಾಲಿನಿಂದ ಒದ್ದು ಕೆಂಗಣ್ಣು ಬೀರಿದರು. ಅವರು ಈ ರೀತಿ ವರ್ತಿಸಿದ್ದು ನೋಡಿ ನೆಟ್ಟಿಗರು ಕಿಡಿ ಕಾರಿದ್ದು, ಒಬ್ಬ ನಾಯಕನ ಲಕ್ಷಣ ಇದಲ್ಲ. ಇತ್ತೀಚೆಗಿನ ದಿನಗಳಲ್ಲಿ ರೋಹಿತ್ ಮೈದಾನದಲ್ಲಿ ಎಲ್ಲೆ ಮೀರಿ ವರ್ತಿಸುವುದು ಜಾಸ್ತಿಯಾಗುತ್ತಿದೆ ಎಂದಿದ್ದಾರೆ.
ಇದಕ್ಕೂ ಮೊದಲು ಪಾಕ್ ವಿರುದ್ಧದ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ ಕ್ಯಾಚ್ ಬಿಟ್ಟಾಗ ರೋಹಿತ್ ಕಿರುಚಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಳಪೆ ಮೊತ್ತಕ್ಕೆ ಔಟಾದ ರಿಷಬ್ ಪಂತ್ ಗೆ ಡ್ರೆಸ್ಸಿಂಗ್ ರೂಂನಲ್ಲಿ ಕೂಗಾಡಿದ್ದರು. ಇದೆಲ್ಲಾ ಅವರ ಹತಾಶೆಯನ್ನು ಎತ್ತಿ ತೋರಿಸುತ್ತಿದೆ.