Publish Date: Wed, 07 Sep 2022 (08:20 IST)
Updated Date: Wed, 07 Sep 2022 (09:14 IST)
ಮುಂಬೈ: ಮಂಡಿ ನೋವಿನಿಂದಾಗಿ ಏಷ್ಯಾ ಕಪ್ ಟೂರ್ನಿಯಿಂದ ಅರ್ಧದಲ್ಲೇ ಹೊರನಡೆದಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
ಜಡೇಜಾ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ ಬಳಿಕ ಮಂಡಿ ನೋವಿನಿಂದಾಗಿ ಏಷ್ಯಾ ಕಪ್ ನಿಂದ ಹೊರಬಿದ್ದಿದ್ದರು. ಅವರು ಟಿ20 ವಿಶ್ವಕಪ್ ವೇಳೆಗೂ ತಂಡಕ್ಕೆ ಮರಳುವುದು ಅನುಮಾನವೆನ್ನಲಾಗಿದೆ.
ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸದ್ಯದಲ್ಲೇ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.