ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ತಾವೇ ಪ್ರಧಾನ ಪಾತ್ರವಹಿಸಿದ್ದರೂ ನಾಯಕ ಅಜಿಂಕ್ಯಾ ರೆಹಾನೆ ಆ ಕ್ರೆಡಿಟ್ ನ್ನು ಸಂಪೂರ್ಣವಾಗಿ ಯುವ ಕ್ರಿಕೆಟಿಗರಿಗೆ ನೀಡಿದ್ದಾರೆ.
ಎರಡೂ ಇನಿಂಗ್ಸ್ ಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ರೆಹಾನೆ ಈ ಗೆಲುವಿಗೆ ಪದಾರ್ಪಣೆ ಪಂದ್ಯದಲ್ಲೇ ಉತ್ತಮ ಪ್ರದರ್ಶನವಿತ್ತ ವೇಗಿ ಮೊಹಮ್ಮದ್ ಸಿರಾಜ್, ಶಬ್ನಂ ಗಿಲ್, ಆಲ್ ರೌಂಡರ್ ರವೀಂದ್ರ ಜಡೇಜಾ ಕಾರಣ ಎಂದು ಹೊಗಳಿದ್ದಾರೆ. ರೆಹಾನೆಯ ಈ ಸ್ವಭಾವವೇ ಅವರನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ.