Select Your Language

Notifications

webdunia
webdunia
webdunia
webdunia

ನೀನೊಬ್ಬ ಡುಮ್ಮ! ರಿಷಬ್ ಪಂತ್ ಕಿಚಾಯಿಸಿದ ಮ್ಯಾಥ್ಯೂ ವೇಡ್

ರಿಷಬ್ ಪಂತ್
ಮೆಲ್ಬೋರ್ನ್: ರಿಷಬ್ ಪಂತ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ನಡುವಿನ ಸ್ಲೆಡ್ಜಿಂಗ್ ಸಮರ ಮತ್ತೆ ಶುರುವಾಗಿದೆ. ಕಳೆದ ಬಾರಿ ರಿಷಬ್ ಮತ್ತು ಟಿಮ್ ಪೇಯ್ನ್ ನಡುವೆ ಭರ್ಜರಿ ಮಾತಿನ ಸಮರ ನಡೆದಿತ್ತು. ಈ ಬಾರಿ ಮ್ಯಾಥ್ಯೂ ವೇಡ್ ರಿಷಬ್ ರನ್ನು ಕೆಣಕಿದ್ದಾರೆ.

 
ರಿಷಬ್ ಪಂತ್ ದೇಹ ತೂಕದ ಬಗ್ಗೆ ಮ್ಯಾಥ್ಯೂ ವೇಡ್ ತಮಾಷೆ ಮಾಡಿದ್ದು, ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ಯಾಟಿಂಗ್ ವೇಳೆ ವೇಡ್ ರಿಷಬ್ ಗೆ ‘ನಿನ್ನ ದೇಹ ತೂಕವೆಷ್ಟು? 20 ಕೆ.ಜಿ. ಜಾಸ್ತಿ ಇದ್ದೀಯಾ? 25 ಅಥವಾ 30 ಕೆ.ಜಿ. ಜಾಸ್ತಿಯೇ ದೇಹ ತೂಕ ಇರ್ತೀಯಾ ಬಿಡು’ ಎಂದು ಕಿಚಾಯಿಸಿದ್ದಾರೆ. ಇದಕ್ಕೆ ರಿಷಬ್ ಕೂಡಾ ತಿರುಗೇಟು ನೀಡಿದ್ದಾರೆ. ಇಬ್ಬರೂ ಪದೇ ಪದೇ ಕಣ್ಣಲ್ಲೇ ದಿಟ್ಟಿಸಿ ನೋಡುತ್ತಾ ಸಮರ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಗಳಿಸಿದರೂ ಇದು ನನ್ನ ಬೆಸ್ಟ್ ಇನಿಂಗ್ಸ್ ಅಲ್ಲ ಎಂದ ಅಜಿಂಕ್ಯಾ ರೆಹಾನೆ