Publish Date: Sun, 25 Mar 2018 (09:17 IST)
Updated Date: Sun, 25 Mar 2018 (09:20 IST)
ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಟೀಂ ಇಂಡಿಯಾ ಗೆಳೆಯ ಕನ್ನಡಿಗ ಬ್ಯಾಟ್ಸ್ ಮ್ಯಾನ್ ಕೆಎಲ್ ರಾಹುಲ್ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?
ಅಷ್ಟಕ್ಕೇ ಇದೇನು ಸೀರಿಯಸ್ ಕಾರಣವಲ್ಲ. ಯುವಿ ಕ್ಷಮೆ ಕೇಳಿರುವುದು ತಮಾಷೆಗಾಗಿ. ಐಪಿಎಲ್ ಹತ್ತಿರ ಬರುತ್ತಿದ್ದಂತೆ ಕ್ರಿಕೆಟಿಗರು ತಮ್ಮ ಲುಕ್ ಸ್ಟೈಲಿಶ್ ಮಾಡಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದರು. ಇದೀಗ ಯುವಿ ಸರದಿ.
ಕೊಹ್ಲಿ ಹೇರ್ ಕಟ್ ಮಾಡಿಸಿಕೊಂಡ ಅದೇ ಸ್ಟೈಲಿಶ್ ಬಳಿ ಹೊಸ ಹೇರ್ ಸ್ಟೈಲ್ ಮಾಡಿಸಿಡಕೊಂಡ ಯುವರಾಜ್ ಸಿಂಗ್ ಬಳಿಕ ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ಬಳಿಕ ಕೆಎಲ್ ರಾಹುಲ್ ಬಳಿ ಕ್ಷಮೆ ಯಾಚಿಸಿದ್ದಾರೆ. ಯಾಕೆಂದರೆ ಯುವಿ ಮಾಡಿಸಿಕೊಂಡ ಹೇರ್ ಸ್ಟೈಲ್ ಪಕ್ಕಾ ರಾಹುಲ್ ಹೇರ್ ಸ್ಟೈಲ್ ರೀತಿಯೇ ಇದೆ. ಅದೇ ಕಾರಣಕ್ಕೆ ರಾಹುಲ್ ಬಳಿ ಸಾರಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ