Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಐಪಿಎಲ್ ಗದ್ದಲ ಮುಗಿದ ಮೇಲೆ ಟೀಂ ಇಂಡಿಯಾಗೆ ಮಹತ್ವದ ಇಂಗ್ಲೆಂಡ್ ಸರಣಿ ಎಂಬ ಅಗ್ನಿ ಪರೀಕ್ಷೆ ನಡೆಯಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇಂಗ್ಲೆಂಡ್ ಗೆ ಕಳೆದ ಬಾರಿ ಪ್ರವಾಸ ಮಾಡಿದ್ದಾಗ ಕೊಹ್ಲಿ ಹೆಚ್ಚು ಯಶಸ್ಸು ಸಾಧಿಸಿರಲಿಲ್ಲ. ಇದೇ ಕಾರಣಕ್ಕೆ ಕಳೆದ ಬಾರಿ ಆದ ಮುಜುಗರ ಈ ಬಾರಿ ಆಗಬಾರದೆಂದು ಕೊಹ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಇಂಗ್ಲೆಂಡ್ ಸರಣಿಗೆ ಮೊದಲು ಅಲ್ಲಿ ನಡೆಯುವ ಕೌಂಟಿ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಆಡಲಿದ್ದಾರೆ ಕೊಹ್ಲಿ. ಆ ಮೂಲಕ ಅಲ್ಲಿನ ಪಿಚ್ ಗಳ ಸ್ಥಿತಿ ಗತಿ ಅರಿಯಲಿದ್ದಾರೆ. ಸರ್ರೆ ತಂಡದ ಪರ ಕೊಹ್ಲಿ ಆಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಪಂದ್ಯಗಳು ಜೂನ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಅಫ್ಘಾನಿಸ್ತಾನ ತಂಡದ ಪರ ಟೆಸ್ಟ್ ಸರಣಿ ಆಡದೇ ಇರಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ