Publish Date: Tue, 13 Mar 2018 (09:57 IST)
Updated Date: Tue, 13 Mar 2018 (10:00 IST)
ಕೊಲೊಂಬೊ: ಬಹಳ ದಿನಗಳ ನಂತರ ಕನ್ನಡಿಗ ಕೆಎಲ್ ರಾಹುಲ್ ಗೆ ಚುಟುಕು ಕ್ರಿಕೆಟ್ ನಲ್ಲಿ ಆಡುವ ಅವಕಾಶ ಸಿಕ್ಕಿತು. ನಿನ್ನೆ ನಡೆದ ಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಡಲು ಅವಕಾಶ ಪಡೆದ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಲಿಳಿದರು.
ಆದರೆ ಅವರ ನೆಚ್ಚಿನ ಆರಂಭಿಕ ಸ್ಥಾನ ಸಿಗಲಿಲ್ಲ. ಹಾಗಿದ್ದರೂ ತಮಗೆ ಸಿಕ್ಕ ಅವಕಾಶವನ್ನು ಬಳಸಲು ಅವರು ವಿಫಲರಾಗಿದ್ದಾರೆ. 17 ಎಸೆತಗಳನ್ನು ಎದುರಿಸಿದ ಅವರು ಒಂದು ಬೌಂಡರಿಯೊಂದಿಗೆ 18 ರನ್ ಗಳಿಸಿ ಔಟಾದರು.
ರಿಷಬ್ ಪಂತ್ ಜಾಗದಲ್ಲಿ ಆಡಲಿಳಿದ ರಾಹುಲ್ ಹೆಚ್ಚಿನ ರನ್ ಗಳಿಸಿಲ್ಲ ನಿಜ. ಆದರೆ ರಾಹುಲ್ ಒಬ್ಬ ಕ್ಲಾಸ್ ಬ್ಯಾಟ್ಸ್ ಮನ್. ಹೀಗಾಗಿ ಮುಂದಿನ ಪಂದ್ಯದಲ್ಲಿ ಸಿಡಿಯಲೂಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ