Publish Date: Sun, 11 Jun 2023 (18:03 IST)
Updated Date: Sun, 11 Jun 2023 (18:05 IST)
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲುಂಡ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರೀ ಟೀಕೆಗೊಳಗಾಗಿದ್ದಾರೆ.
ರೋಹಿತ್ ನಾಯಕತ್ವದ ಶೈಲಿ ಬಗ್ಗೆ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಮುಂದೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲಬೇಕೆಂದರೆ ಮೊದಲು ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಕೆಲವರು ಅತ್ತ ರನ್ ಗಳಿಸುತ್ತಿಲ್ಲ, ಫೀಲ್ಡಿಂಗ್ ಮಾಡಲ್ಲ, ಫಿಟ್ ಆಗಿಯೂ ಇಲ್ಲ, ನಾಯಕತ್ವದಲ್ಲೂ ಪಾಸ್ ಆಗಿಲ್ಲ ಇಂತಹ ರೋಹಿತ್ ನಮಗೆ ಬೇಡ ಎಂದು ಕೆಲವರು ಕಿಡಿ ಕಾರಿದ್ದಾರೆ. ಮತ್ತೆ ಕೆಲವರು ಐಪಿಎಲ್ ಟ್ರೋಫಿ ಗೆದ್ದಷ್ಟು ಸುಲಭವಲ್ಲ ಟೀಂ ಇಂಡಿಯಾವನ್ನು ಐಸಿಸಿ ಟೂರ್ನಿಗಳಲ್ಲಿ ಮುನ್ನಡೆಸುವುದು ಎಂದು ಟಾಂಗ್ ಕೊಟ್ಟಿದ್ದಾರೆ.