Publish Date: Sun, 11 Jun 2023 (09:01 IST)
Updated Date: Sun, 11 Jun 2023 (09:29 IST)
ದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಎಂದರೆ ಟೀಂ ಇಂಡಿಯಾ ಫ್ಯಾನ್ಸ್ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರನ್ನು ಮಿಸ್ ಮಾಡಿಕೊಳ್ಳುತ್ತಾರೆ.
ಇದೀಗ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ಫ್ಯಾನ್ಸ್ ರಿಷಬ್ ಪಂತ್ ರನ್ನು ನೆನಪು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ರಸ್ತೆ ಅಪಘಾತದಿಂದ ಗಾಯಗೊಂಡು ರಿಷಬ್ ಕೆಲವು ದಿನಗಳಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಈಗಷ್ಟೇ ಅವರು ನಡೆದಾಡುವ ಮಟ್ಟಿಗೆ ಬಂದಿದ್ದಾರೆ.
ಆದರೆ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ಸಂಕಷ್ಟದಲ್ಲಿದ್ದಾಗಲೆಲ್ಲಾ ಅದ್ಭುತ ಇನಿಂಗ್ಸ್ ಆಡುವ ಆಪತ್ ಬಾಂಧವ ರಿಷಬ್ ಕೊರತೆ ಡಬ್ಲ್ಯುಟಿಸ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಕಾಡಿತು. ಅವರ ಕೊರತೆಯಿಂದ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ದೊಡ್ಡ ಕೊರತೆ ಕಾಡಿದೆ. ಇದರಿಂದಾಗಿ ಫ್ಯಾನ್ಸ್ ರಿಷಬ್ ರನ್ನು ರಿಪ್ಲೇಸ್ ಮಾಡುವ ಆಟಗಾರ ಮತ್ತೊಬ್ಬರಿಲ್ಲ. ಅವರಿದ್ದಿದ್ದರೆ ಈ ಪಂದ್ಯದ ಮಜವೇ ಬೇರೆಯಾಗುತ್ತಿತ್ತು ಎಂದಿದ್ದಾರೆ.