Publish Date: Sun, 11 Jun 2023 (09:51 IST)
Updated Date: Sun, 11 Jun 2023 (09:53 IST)
ದಿ ಓವಲ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಅಂಪಾಯರ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು.
ಆಸೀಸ್ ಫೀಲ್ಡರ್ ಕ್ಯಾಮರೂನ್ ಗ್ರೀನ್ ಪಡೆದ ಕ್ಯಾಚ್ ವೇಳೆ ಬಾಲ್ ನೆಲಕ್ಕೆ ಸವರಿದ್ದರೂ ಥರ್ಡ್ ಅಂಪಾಯರ್ ಔಟ್ ತೀರ್ಪು ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ವತಃ ಶುಬ್ಮನ್ ಗಿಲ್ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಗ್ರೀನ್ ಕ್ಯಾಚ್ ಪಡೆಯುವ ಫೋಟೋ ಪ್ರಕಟಿಸಿರುವ ಗಿಲ್ ಚಪ್ಪಾಳೆ ತಟ್ಟುವ ಇಮೋಜಿ ಹಾಕಿ ವ್ಯಂಗ್ಯ ಮಾಡಿದ್ದಾರೆ.