ಬಾರ್ಬಡೋಸ್: ಟಿ20 ವಿಶ್ವಕಪ್ ಫೈನಲ್ ನಲ್ಲಿ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ರೋಫಿ ಪಡೆಯಲು ವಿಶಿಷ್ಟವಾಗಿ ನಡೆದುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆದಿತ್ತು. ಆ ನಡಿಗೆಯ ಹಿಂದಿನ ರೂವಾರಿ ಯಾರು ಎಂಬುದು ಈಗ ಬಯಲಾಗಿದೆ.
ನಾಯಕ ರೋಹಿತ್ ಶರ್ಮಾರನ್ನು ಕಾಮೆಂಟೇಟರ್ ಮಾತನಾಡಿಸಿದ ಬಳಿಕ ಟ್ರೋಫಿ ನೀಡುವ ಕಾರ್ಯಕ್ರಮ ನಡೆಯಿತು. ಇದಕ್ಕಾಗಿ ಟೀಂ ಇಂಡಿಯಾ ಆಟಗಾರರು ಆಗಲೇ ಪೋಡಿಯಂನಲ್ಲಿ ಸಾಲಾಗಿ ನಿಂತು ತಯಾರಾಗಿದ್ದರು. ಜಯ್ ಶಾ ಕೂಡಾ ಟ್ರೋಫಿ ನೀಡಲು ತಯಾರಾಗಿ ನಿಂತಿದ್ದರು.
ಈ ವೇಳೆ ರೋಹಿತ್ ಮಾತು ಮುಗಿಸಿ ಟ್ರೋಫಿ ಪಡೆಯಲು ಫನ್ನಿಯಾಗಿ ನಡೆದುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯಿತು. ಚಿಕ್ಕ ಮಕ್ಕಳಂತೆ ಸ್ಲೋ ಮೋಷನ್ ನಲ್ಲಿ ಬಂದ ರೋಹಿತ್ ಗೆ ಈ ನಡಿಗೆ ಹೇಳಿಕೊಟ್ಟಿದ್ದು ತಂಡದ ಸ್ಪಿನ್ನರ್ ಕುಲದೀಪ್ ಯಾದವ್. ಇದಕ್ಕೆ ಸಾಕ್ಷ್ಯವೂ ಸಿಕ್ಕಿದೆ.
ಭಾರತೀಯ ಆಟಗಾರರು ಇದಕ್ಕೆ ಮೊದಲು ಮೆಡಲ್ ಪಡೆಯಲು ಒಬ್ಬೊರಾಗಿ ಬರುವಾಗ ಸಾಲಿನಲ್ಲಿದ್ದ ಕುಲದೀಪ್ ಯಾದವ್ ಆಗಲೇ ಇಂತಹದ್ದೊಂದು ಸೆಲೆಬ್ರೇಷನ್ ಬಗ್ಗೆ ಎಲ್ಲರಿಗೂ ತಾವೇ ಆಕ್ಟ್ ಮಾಡಿ ತೋರಿಸಿದ್ದರು. ಅದನ್ನು ಎಲ್ಲಾ ಆಟಗಾರರೂ ಕಲಿತುಕೊಂಡಿದ್ದಾರೆ. ಬಳಿಕ ರೋಹಿತ್ ಟ್ರೋಫಿ ಪಡೆಯಲು ಕುಲದೀಪ್ ಹೇಳಿಕೊಟ್ಟಂತೇ ಫನ್ನಿಯಾಗಿ ನಡೆದುಕೊಂಡು ಬಂದಿದ್ದಾರೆ.