ಬೆಂಗಳೂರು: ಐಪಿಎಲ್ ನಿಂದ ಆಟಗಾರನಾಗಿ ನಿವೃತ್ತಿಯಾದ ಬಳಿಕವೂ ದಿನೇಶ್ ಕಾರ್ತಿಕ್ ಆರ್ ಸಿಬಿ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರನ್ನು ಆರ್ ಸಿಬಿಯ ನೂತನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕ ಮಾಡಲಾಗಿದೆ.
ದಿನೇಶ್ ಕಾರ್ತಿಕ್ ಐಪಿಎಲ್ 2024 ರಲ್ಲಿ ನಿವೃತ್ತಿ ಘೋಷಿಸಿದಾಗ ಎಲ್ಲರೂ ಬೇಸರಗೊಂಡಿದ್ದರು. ಆರ್ ಸಿಬಿ ಫ್ಯಾನ್ಸ್ ಅವರಿಗೆ ಭಾವುಕ ವಿದಾಯ ನೀಡಿದ್ದರು. ಆದರೆ ಈಗ ದಿನೇಶ್ ಐಪಿಎಲ್ ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲ, ಸಹಾಯಕ ಸಿಬ್ಬಂದಿಯಾಗಿ.
ಈ ಮೂಲಕ ಆರ್ ಸಿಬಿ ಮತ್ತೊಮ್ಮೆ ಅವರ ಕೈ ಹಿಡಿದಿದೆ. ಆರ್ ಸಿಬಿಯ ನೂತನ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಡಿಕೆ ಬಾಸ್ ನೇಮಕದ ಬಗ್ಗೆ ಆರ್ ಸಿಬಿ ಇಂದು ಅಧಿಕೃತ ಪ್ರಕಟಣೆ ನೀಡಿದೆ. ಸದ್ಯಕ್ಕೆ ಅವರು ವೆಸ್ಟ್ ಇಂಡೀಸ್ ನಲ್ಲಿ ಟಿ20 ವಿಶ್ವಕಪ್ ಕಾಮೆಂಟೇಟರ್ ಆಗಿ ಕಾರ್ಯನಿರ್ವವಹಿಸಲು ತೆರಳಿದ್ದಾರೆ.
ಐಪಿಎಲ್ 2025 ರಲ್ಲೂ ಈ ಮೂಲಕ ದಿನೇಶ್ ಕಾರ್ತಿಕ್ ತಂಡದ ಭಾಗವಾಗಿರಲಿದ್ದಾರೆ. ಹಿರಿಯ ಕ್ರಿಕೆಟಿಗನಿಗೆ ಆರ್ ಸಿಬಿ ತಕ್ಕ ಗೌರವವನ್ನೇ ನೀಡಿದೆ. ಆರ್ ಸಿಬಿ ಪರ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈಗ ಮೆಂಟರ್ ಆಗಿ ಮತ್ತೊಂದು ಇನಿಂಗ್ಸ್ ಶುರು ಮಾಡಲಿದ್ದಾರೆ.