Webdunia - Bharat's app for daily news and videos

Install App

ಶೂನ್ಯಕ್ಕೆ ಔಟಾದ ಶುಬ್ಮನ್ ಗಿಲ್ ಜೊತೆ ಆರಕ್ಕೆ ಔಟಾದ ವಿರಾಟ್ ಕೊಹ್ಲಿ ಪೆವಿಲಿಯನ್ ನಲ್ಲಿ ಚರ್ಚೆ

Krishnaveni K
ಗುರುವಾರ, 19 ಸೆಪ್ಟಂಬರ್ 2024 (11:40 IST)
Photo Credit: X
ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಅಗ್ರ ಮೂವರು ಬ್ಯಾಟಿಗರು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಔಟಾದ ಬಳಿಕ ಕೊಹ್ಲಿ-ಶುಬ್ಮನ್ ಗಿಲ್ ಪೆವಿಲಿಯನ್ ನಲ್ಲಿ ಕುಳಿತು ಭಾರೀ ಚರ್ಚೆ ನಡೆಸುತ್ತಿದ್ದುದು ಕಣ್ಣಿಗೆ ಬಿದ್ದಿದೆ.

ಮೊದಲನೆಯವರಾಗಿ ರೋಹಿತ್ ಶರ್ಮಾ 6 ರನ್ ಗಳಿಸಿ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಅವರ ಬಳಿಕ ಬಂದ ಶುಬ್ಮನ್ ಗಿಲ್ ಶೂನ್ಯ ಸುತ್ತಿದರು. ಅವರ ಹಿಂದೆಯೇ ಕೊಹ್ಲಿ ಕೂಡಾ 6 ರನ್ ಗಳಿಸಿ ಔಟಾದರು. ಈ ಮೂವರೂ ಔಟಾದ ಬಳಿಕ ಟೀಂ ಇಂಡಿಯಾ ಕೊಂಚ ಹಿನ್ನಡೆ ಅನುಭವಿಸಿತು. ಈ ಹಂತದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಇದೀಗ 28 ಮತ್ತು ರಿಷಬ್ ಪಂತ್ 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಶುಬ್ಮನ್ ಗಿಲ್ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಬೇಗನೇ ಔಟಾಗಿ ಹೋದ ಬೇಸರದಲ್ಲಿ ಇಬ್ಬರೂ ಪೆವಿಲಿಯನ್ ನಲ್ಲಿ ಅಕ್ಕ-ಪಕ್ಕ ಕುಳಿತು ಗಹನವಾದ ಚರ್ಚೆ ಮಾಡುತ್ತಿದ್ದರು. ಬೇಗನೇ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ ಬೇಸರ ಕೊಹ್ಲಿ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಇತ್ತ ರೋಹಿತ್ ಶರ್ಮಾ ಕತೆಯೂ ಏನೂ ಭಿನ್ನವಾಗಿರಲಿಲ್ಲ. ರೋಹಿತ್ ಕೂಡಾ 6 ರನ್ ಗಳಿಸಿ ಔಟಾಗಿದ್ದರು. ಅವರ ಬ್ಯಾಟಿಂಗ್ ನಲ್ಲಿ ಇಂದು ಎಂದಿನ ಅಬ್ಬರವಿರಲಿಲ್ಲ. ಹೀಗಾಗಿ ಬೇಗನೇ ಔಟಾಗಿ ಹೋದ ಬೇಸರ ಅವರ ಮುಖದಲ್ಲೂ ಇತ್ತು. ಸಪ್ಪೆ ಮುಖ ಮಾಡಿಕೊಂಡು ಆಟ ವೀಕ್ಷಿಸುತ್ತಾ ಕುಳಿತಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಮುಂದಿನ ಸುದ್ದಿ
Show comments