Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುವುದು ಕನ್ ಫರ್ಮ್ ಆಗಿದೆ. ಈ ಬಗ್ಗೆ ಸ್ವತಃ ಕೊಹ್ಲಿ ಖಚಿತಪಡಿಸಿದ್ದಾರೆ.
ತಾನು ಸಂಪೂರ್ಣ ಫಿಟ್ ಆಗಿದ್ದು, ಮೂರನೇ ಟೆಸ್ಟ್ ಆಡುವುದಾಗಿ ಕೊಹ್ಲಿ ಮಾಧ‍್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಮೂರನೇ ಟೆಸ್ಟ್ ಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾದ ಕೊಹ್ಲಿ, ತಾನು ಫಿಟ್ ಆಗಿದ್ದು, ಮೊಹಮ್ಮದ್ ಸಿರಾಜ್ ಗಾಯದಿಂದಾಗಿ ಹೊರಗುಳಿಯುತ್ತಿರುವುದಾಗಿ ಹೇಳಿದ್ದಾರೆ.
ಸಿರಾಜ್ ಸಂಪೂರ್ಣ ಫಿಟ್ ಆಗಿಲ್ಲ. ಅವರು ಸಂಪೂರ್ಣ ಫಿಟ್ ಆಗದೇ ಅವರನ್ನು ಆಡುವ ಬಳಗದಲ್ಲಿ ಸೇರಿಸಲು ಸಾಧ‍್ಯವಿಲ್ಲ ಎಂದಿದ್ದಾರೆ. ಹೀಗಾಗಿ ಇಶಾಂತ್ ಸ್ಥಾನ ಪಡೆಯುವುದು ಬಹಿತೇಕ ಖಚಿತವಾಗಿದೆ.