Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮ್ಯಾನೇಜ್ ಮೆಂಟ್ ತಲೆಬಿಸಿ ಹೆಚ್ಚಿಸಿದ ಪೂಜಾರ-ರೆಹಾನೆ

ಮ್ಯಾನೇಜ್ ಮೆಂಟ್ ತಲೆಬಿಸಿ ಹೆಚ್ಚಿಸಿದ ಪೂಜಾರ-ರೆಹಾನೆ
ಜೊಹಾನ್ಸ್ ಬರ್ಗ್ , ಸೋಮವಾರ, 10 ಜನವರಿ 2022 (08:40 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಾದ ಅಜಿಂಕ್ಯಾ ರೆಹಾನೆ ಮತ್ತು ಚೇತೇಶ‍್ವರ ಪೂಜಾರ ಪಾಲಿಗೆ ನಿರ್ಣಾಯಕವಾಗಿತ್ತು.

ಒಂದು ವೇಳೆ ಪೂಜಾರ-ರೆಹಾನೆ ಈ ಪಂದ್ಯದಲ್ಲೂ ವಿಫಲರಾಗಿದ್ದರೆ ಇಬ್ಬರಲ್ಲಿ ಒಬ್ಬರು ತಂಡದಿಂದ ಸ್ಥಾನ ಕಳೆದುಕೊಳ್ಳಬೇಕಾಗಿತ್ತು. ಆದರೆ ಈ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮೆಲ್ಲಾ ಅನುಭವ ಧಾರೆಯೆರೆದು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಇದರಿಂದಾಗಿ ಈಗ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ತಲೆನೋವು ಹೆಚ್ಚಿದೆ. ಈ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲದೆ, ಎರಡನೇ ಇನಿಂಗ್ಸ್ ನಲ್ಲಿ ಬಾಲಂಗೋಚಿಗಳನ್ನು ಇಟ್ಟುಕೊಂಡು ಅಜೇಯ 40 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಲು ಪ್ರಯತ್ನಿಸಿದ್ದರು. ಇದೀಗ ಕೊಹ್ಲಿ ಕಮ್ ಬ್ಯಾಕ್ ಮಾಡಿದರೆ ಈ ಮೂವರಲ್ಲಿ ಯಾರು ಸ್ಥಾನ ಬಿಟ್ಟುಕೊಡುವುದು ಎಂಬ ಚಿಂತೆ ಕಾಡಲಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಬ್ಯಾಟರ್ ಗಳ ನಡುವೆ ಪೈಪೋಟಿ ಹೆಚ್ಚಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ದ್ರಾವಿಡ್ ಸಿಟ್ಟು!