Publish Date: Mon, 10 Jan 2022 (16:43 IST)
Updated Date: Mon, 10 Jan 2022 (16:45 IST)
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಬಿಜೆಪಿಯ ಸೈನಾ ನೆಹ್ವಾಲ್ ಬಗ್ಗೆ ಕೀಳು ಅಭಿರುಚಿಯ ಟ್ವೀಟ್ ಮಾಡಿರುವ ಟಾಲಿವುಡ್ ನಟ ಸಿದ್ಧಾರ್ಥ್ ತೀವ್ರ ಟೀಕೆಗೊಳಗಾಗಿದ್ದಾರೆ. ಸ್ವತಃ ಸೈನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪಂಜಾಬ್ ನಲ್ಲಿ ಪಿಎಂ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಸೈನಾ ವಿಷಾಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಯಾವ ದೇಶದಲ್ಲಿ ಪ್ರಧಾನಿಗೇ ರಕ್ಷಣೆಯಿಲ್ಲವೋ ಅಂತಹ ಯಾವ ದೇಶವೂ ಸುರಕ್ಷಿತ ಎನ್ನಲು ಸಾಧ‍್ಯವಿಲ್ಲ ಎಂದು ಸೈನಾ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ಧಾರ್ಥ್, ವಿಶ್ವದ ಕಾಕ್ ಚಾಂಪಿಯನ್ ಅವರೇ., ಥ್ಯಾಂಕ್ ಗಾಡ್, ನಮ್ಮ ದೇಶವನ್ನು ರಕ್ಷಿಸುವವರಿದ್ದಾರೆ. ಶೇಮ್ ಆನ್ ಯೂ ರಿಹನ್ನಾ ಎಂದು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಭಾರೀ ಟೀಕೆಗೊಳಗಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸೈನಾ, ಒಬ್ಬ ನಟನಾಗಿ ಸಿದ್ಧಾರ್ಥ್ ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಆದರೆ ಈಗ ಅವರು ಇಂತಹ ಹೇಳಿಕೆ ಯಾಕೆ ಕೊಟ್ಟರು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಇನ್ನು ತಮ್ಮ ಟ್ವೀಟ್ ವಿವಾದವಾಗುತ್ತಿದ್ದಂತೇ ಸ್ಪಷ್ಟನೆ ನೀಡಿರುವ ಸಿದ್ಧಾರ್ಥ್ ಇದನ್ನು ಬೇರೆ ರೀತಿಯಲ್ಲಿ ಓದುವುದು ಬೇಡ. ಯಾರಿಗೂ ಅಗೌರವಯುತವಾಗಿ ಹೇಳಿಲ್ಲ ಎಂದಿದ್ದಾರೆ. ಆದರೆ ನಟನ ಟ್ವೀಟ್ ಖಂಡಿಸಿರುವ ಮಹಿಳಾ ಆಯೋಗ ಸಿದ್ಧಾರ್ಥ್ ಖಾತೆಯನ್ನು ಬ್ಲಾಕ್ ಮಾಡುವಂತೆ ಆಗ್ರಹಿಸಿದೆ.