ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಗೆಲ್ಲಲು ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಾರಣವಾಗಿತ್ತು. ಆದರೆ ಅವರು ಮಾಡಿದ ಒಂದು ತಪ್ಪಿನಿಂದ ವಿಲನ್ ಕೂಡಾ ಆಗ್ತಿದ್ದರು. ಹೇಗೆ ಇಲ್ಲಿದೆ ನೋಡಿ ವಿವರ.
ತಂಡ ಗೆಲುವಿನ ಸನಿಹದಲ್ಲಿದ್ದಾಗ ಕೊಹ್ಲಿ ಬೇಡದ ಹೊಡೆತಕ್ಕೆ ಕೈ ಹಾಕಿ ಔಟಾದರು. ತಂಡದ ಪ್ಲ್ಯಾನ್ ಪ್ರಕಾರ ಕೆಎಲ್ ರಾಹುಲ್ ದೊಡ್ಡ ಹೊಡೆತಕ್ಕೆ ಕೈ ಹಾಕಬೇಕಿತ್ತು. ಕೊಹ್ಲಿ ಕೊನೆಯ ತನಕ ಕ್ರೀಸ್ ನಲ್ಲಿರಬೇಕಿತ್ತು.
ಆದರೆ ಕೊಹ್ಲಿ ಇಲ್ಲದ ಹೊಡೆತಕ್ಕೆ ಕೈ ಹಾಕಲು ಹೋಗಿ ಔಟಾದರು. ಈ ಪಂದ್ಯವನ್ನು ಭಾರತ ಗೆದ್ದಿರುವುದರಿಂದ ಕೊಹ್ಲಿ ಹೀರೋ ಆಗಿಯೇ ಉಳಿದುಕೊಂಡರು. ಒಂದು ವೇಳೆ ಭಾರತ ಸೋತಿದ್ದರೆ ಅವರು ವಿಲನ್ ಆಗುತ್ತಿದ್ದರು.
ಕೊಹ್ಲಿ ಔಟಾದಾಗ ಪಕ್ಕದಲ್ಲಿದ್ದ ಕೆಎಲ್ ರಾಹುಲ್ ಜೊತೆಗೆ ಕೋಚ್ ಗೌತಮ್ ಗಂಭೀರ್ ಕೂಡಾ ಸಿಟ್ಟಾಗಿದ್ದರು. ಇಲ್ಲದ ಹೊಡೆತಕ್ಕೆ ಯಾಕೆ ಕೈ ಹಾಕಿದ ಎಂದು ಪಕ್ಕದಲ್ಲಿದ್ದ ಸಹಾಯಕ ಸಿಬ್ಬಂದಿ ಜೊತೆ ಗಂಭೀರ್ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲ, ಪೆವಿಲಿಯನ್ ಗೆ ಬಂದ ಕೊಹ್ಲಿ ಜೊತೆಯೂ ಈ ಬಗ್ಗೆ ಮಾತನಾಡಿದ್ದರು.
ಒಂದು ವೇಳೆ ಟೀಂ ಇಂಡಿಯಾ ಕೊಹ್ಲಿ ಮಾಡಿದ ತಪ್ಪಿನಿಂದ ಸೋತು ಹೋಗಿದ್ದರೆ ಅವರು ಇಂದು ಎಲ್ಲರ ಟೀಕೆಗೆ ಗುರಿಯಾಗುತ್ತಿದ್ದರು. ಆದರೆ ಕೆಎಲ್ ರಾಹುಲ್ ಅದನ್ನು ತಪ್ಪಿಸಿದರು. ಕೊಹ್ಲಿ ಹೀರೋ ಆಗಿಯೇ ಉಳಿದುಕೊಂಡರು.