Select Your Language

Notifications

webdunia
webdunia
webdunia
webdunia

ಭಾರತಕ್ಕೆ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರಾಳಿ: ಚೋಕರ್ಸ್‌ ಹಣೆಪಟ್ಟಿ ಕಳಚದ ದಕ್ಷಿಣ ಆಫ್ರಿಕಾ

ICC Champions Trophy Cricket

Sampriya

ಲಾಹೋರ್‌ , ಬುಧವಾರ, 5 ಮಾರ್ಚ್ 2025 (23:52 IST)
Photo Courtesy X
ಲಾಹೋರ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವು 50 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿತು.

ದುಬೈನಲ್ಲಿ ಭಾನುವಾರ ನಡೆಯುವ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ತಂಡವು ಭಾರತ ತಂಡವನ್ನು ಎದುರಿಸಲಿದೆ. ಭಾರತ ಸತತ ಮೂರನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. 2002 ಮತ್ತು 2013ರಲ್ಲಿ ಭಾರತ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿತ್ತು.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ತಂಡವು ರಚಿನ್ ರವೀಂದ್ರ (108, 101ಎ) ಮತ್ತು ಕೇನ್‌ ವಿಲಿಯಮ್ಸನ್‌ (102, 94ಎ) ಅವರ ಭರ್ಜತಿ ಶತಕಗಳ ನೆರವಿನಿಂದ ನ್ಯೂಜಿಲೆಂಡ್‌ 6 ವಿಕೆಟ್‌ಗೆ 362 ರನ್‌ಗಳ ಗಳಿಸಿತು.

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು  9 ವಿಕೆಟ್‌ಗೆ 312 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಡೇವಿಡ್‌ ಮಿಲ್ಲರ್‌ ಏಕಾಂಗಿ ಹೋರಾಟ ನಡೆಸಿ ಅಜೇಯ 100 ರನ್‌ ಸಿಡಿಸಿ ಗಮನ ಸೆಳೆದರು. ಇದಕ್ಕೂ ಮೊದಲು ನಾಯಕ ತೆಂಬಾ ಬವುಮಾ 56 ರನ್‌ ಮತ್ತು ರಸಿ ವಾನ್‌ಡರ್‌ ಡಸೆ 69 ರನ್‌ ಗಳಿಸಿದ್ದರು.

ಐಸಿಸಿ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಪ್ರತಿ ಬಾರಿಯೂ ನಾಕೌಟ್‌ನಲ್ಲೇ ಮುಗ್ಗರಿಸುತ್ತಿದೆ. ತಂಡಕ್ಕೆ ಈನತಕ ಐಸಿಸಿ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯೂ ನಿರೀಕ್ಷೆ ಹುಸಿಯಾಯಿತು.
  

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಟೇಬಲ್‌ ಟೆನಿಸ್‌ ದಿಗ್ಗಜ ಆಟಗಾರ ಶರತ್ ಕಮಲ್ ದಿಢೀರ್‌ ನಿವೃತ್ತಿ ಘೋಷಣೆ