Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಶಿಪ್ ಅರ್ಹತೆ ಪಡೆಯಲು ಏನು ಮಾಡಬೇಕು?

ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಶಿಪ್ ಅರ್ಹತೆ ಪಡೆಯಲು ಏನು ಮಾಡಬೇಕು?
ಅಹಮ್ಮದಾಬಾದ್ , ಶುಕ್ರವಾರ, 5 ಮಾರ್ಚ್ 2021 (09:03 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ರಿಂದ ಮುನ್ನಡೆ ಗಳಿಸಿದೆ. ಇದೀಗ ಭಾರತಕ್ಕೆ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾದಿ ಸುಗಮವಾಗಿದೆ.


ಭಾರತಕ್ಕೆ ಇದೀಗ ಫೈನಲ್ಸ್ ನಲ್ಲಿ ಸ್ಥಾನ ಭದ್ರಪಡಿಸಲು ಏನು ಮಾಡಬೇಕು ಎಂಬುದು ಸದ್ಯದ ಪ್ರಶ್ನೆ. ಅಂಕದ ಲೆಕ್ಕಾಚಾರ ನೋಡಿದರೆ ಭಾರತಕ್ಕೆ ಈಗ ಒಂದು ಗೆಲುವು ಅಥವಾ ಡ್ರಾ ಸಾಕು.

ಅಂತಿಮ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೂ ಸಾಕು. ಭಾರತ ಸುಲಭವಾಗಿ ಲಾರ್ಡ್ಸ್ ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲು ಅರ್ಹತೆ ಗಳಿಸಲಿದೆ.

ಆದರೆ ಅತ್ತ ಇಂಗ್ಲೆಂಡ್ ಗೆ ಚಾಂಪಿಯನ್ ಶಿಪ್ ಹಾದಿ ಬಹುತೇಕ ಮುಗಿದಿದೆ. ಒಂದು ವೇಳೆ ಇಂಗ್ಲೆಂಡ್ ಚಾಂಪಿಯನ್ ಶಿಪ್ ಕನಸು ನನಸಾಗಿಟ್ಟುಕೊಳ್ಳಬೇಕಾದರೆ ಅಂತಿಮ ಟೆಸ್ಟ್ ಪಂದ್ಯವನ್ನು ಭರ್ಜರಿ ಅಂತರದಿಂದ ಗೆಲ್ಲಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಕೊಹ್ಲಿ-ಬೆನ್ ಸ್ಟೋಕ್ಸ್ ನಡುವೆ ಕಿತ್ತಾಟ: ಮಧ್ಯಕಪ್ರವೇಶಿಸಿದ ಅಂಪಾಯರ್