ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಪರ ಆಡುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಾಹೀರಾತೊಂದರಲ್ಲಿ ದೀಪಿಕಾ ಪಡುಕೋಣೆ ಜತೆ ನಟಿಸಲ್ಲ ಎಂದಿದ್ದಕ್ಕೆ ಆರ್ ಸಿಬಿ ಕೋಟ್ಯಾಂತರ ರೂಪಾಯಿ ಡೀಲ್ ಕಳೆದುಕೊಂಡಿದೆ.
ಮೂಲಗಳ ಪ್ರಕಾರ ಆರ್ ಸಿಬಿ ಮತ್ತು ಗೋ ಐಬಿಬೋ ಡಾಟ್ ಕಾಮ್ ನಡುವೆ ಕೋಟ್ಯಾಂತರ ರೂಪಾಯಿ ಡೀಲ್ ನಡೆಯಬೇಕಿತ್ತು. ಈ ಟ್ರಾವೆಲ್ ಏಜೆನ್ಸಿ ಕಂಪನಿಯ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ಮತ್ತು ದೀಪಿಕಾ ಜತೆಯಾಗಿ ಕಾಣಿಸಿಕೊಳ್ಳಬೇಕಿತ್ತು.
ಆದರೆ ಕೊಹ್ಲಿ ತನ್ನ ಪತ್ನಿ ನಟಿ, ಅನುಷ್ಕಾ ಶರ್ಮಾ ಹೊರತಾಗಿ ಬೇರೆ ಯಾವ ನಟಿಯ ಜತೆಗೂ ನಟಿಸಲ್ಲ ಎಂದು ಬಿಟ್ಟರಂತೆ. ಇದೇ ಕಾರಣಕ್ಕೆ ಆರ್ ಸಿಬಿ ಇದೀಗ 11 ಕೋಟಿ ರೂ. ಡೀಲ್ ಕಳೆದುಕೊಂಡಿದೆ. ಕೊಹ್ಲಿಯೇನೋ ಪತ್ನಿ ಮೇಲಿನ ಪ್ರೀತಿಗೆ ಹೀಗೆ ಹೇಳಿ ಬಿಟ್ಟರು, ಆದರೆ ಇದರಿಂದಾಗಿ ನಷ್ಟವಾಗಿದ್ದು ಆರ್ ಸಿಬಿಗೆ!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ