Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪಕ್ಕೊಳಗಾಗಿರುವ ವೇಗಿ ಮೊಹಮ್ಮದ್ ಶಮಿ ವಿರುದ್ಧ ಮಾಡಲಾಗಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದ ತನಿಖೆ ಪೂರ್ಣಗೊಳಿಸಿದ ಬಿಸಿಸಿಐ ಕ್ಲೀನ್ ಚಿಟ್ ನೀಡಿದೆ.
ಈ ಆರೋಪಗಳಿಂದಾಗಿ ಶಮಿಗೆ ಮೊದಲು ಪ್ರಕಟಿಸಲಾಗಿದ್ದ ವಾರ್ಷಿಕ ಗುತ್ತಿಗೆಯಲ್ಲಿ ಸ್ಥಾನ ನೀಡಲಾಗಿರಲಿಲ್ಲ. ಇದೀಗ 3 ಕೋಟಿ ರೂ. ಗಳ ಒಪ್ಪಂದ ನೀಡಿದೆ.
ಆಂತರಿಕ ಸಮಿತಿ ರಚಿಸಿ ತನಿಖೆ ನಡೆಸಿದ ಬಿಸಿಸಿಐ ಮೊದಲೇ ಹೇಳಿದಂತೆ ಕ್ಲೀನ್ ಚಿಟ್ ಸಿಕ್ಕಿದ ಹಿನ್ನಲೆಯಲ್ಲಿ ವಾರ್ಷಿಕ ಗುತ್ತಿಗೆ ನೀಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಶಮಿ ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಂದಲೂ ಮುಕ್ತನಾಗುವ ವಿಶ್ವಾಸವಿದೆ ಎಂದಿದ್ದಾರೆ. ಪತ್ನಿ ಹಸೀನ್ ಜಹಾನ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ