Publish Date: Mon, 30 Nov 2020 (08:52 IST)
Updated Date: Mon, 30 Nov 2020 (08:54 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾರನ್ನು ನೆಟ್ಟಿಗರು ತೀವ್ರ ಟೀಕೆ ಮಾಡಿದ್ದಾರೆ.
ಬುಮ್ರಾ ಐಪಿಎಲ್ ನಲ್ಲಿ ಮಾತ್ರ ತಮ್ಮ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸುತ್ತಾರೆ. ರಾಷ್ಟ್ರೀಯ ತಂಡದಲ್ಲಿ ಅದರ ಎಳ್ಳಷ್ಟೂ ಪ್ರದರ್ಶನ ನೀಡಲ್ಲ ಎಂದು ನೆಟ್ಟಿಗರು ಬುಮ್ರಾರನ್ನು ಟೀಕೆ ಮಾಡಿದ್ದಾರೆ. ಇನ್ನು, ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾಗೆ ವಿಕೆಟ್ ಹಿಂದುಗಡೆಯಿಂದ ಬಹುಶಃ ಧೋನಿ ಸಲಹೆ ಕೇಳದೇ ಆಡುವ ಸ್ಪೂರ್ತಿಯೇ ಬರುತ್ತಿಲ್ಲವೇನೋ ಎಂದು ನೆಟ್ಟಿಗರು ಸ್ಪಿನ್ನರ್ ಗಳನ್ನು ಲೇವಡಿ ಮಾಡಿದ್ದಾರೆ.