Publish Date: Sun, 29 Nov 2020 (12:55 IST)
Updated Date: Sun, 29 Nov 2020 (12:56 IST)
ಸಿಡ್ನಿ: 2019 ರ ವಿಶ್ವಕಪ್ ನಲ್ಲಿ ಬೌಲಿಂಗ್ ಮಾಡಿದ್ದೇ ಕೊನೆ. ಅದಾದ ಬಳಿಕ ಬೆನ್ನು ನೋವಿಗೊಳಗಾಗಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿ ಪ್ರಮುಖ ವಿಕೆಟ್ ಕಿತ್ತರು.
ಬಹಳ ದಿನಗಳ ನಂತರ ಇಂದು ಬೌಲಿಂಗ್ ಗಿಳಿದ ಪಾಂಡ್ಯ ಶತಕ ಗಳಿಸಿದ್ದ ಸ್ಟೀವ್ ಸ್ಮಿತ್ ವಿಕೆಟ್ ನ್ನು ಕಬಳಿಸುವ ಮೂಲಕ ತಂಡಕ್ಕೆ ಬ್ರೇಕ್ ಥ್ರೂ ನೀಡಿದರು. ಕಳೆದ ಪಂದ್ಯದ ಬಳಿಕ ಮಾತನಾಡಿದ್ದ ಪಾಂಡ್ಯ ನಾನು ಸಮರ್ಥನಾಗಿದ್ದೇನೆ ಎಂದು ಖಚಿತವಾಗುವವರೆಗೆ ಬೌಲಿಂಗ್ ಮಾಡಲ್ಲ ಎಂದಿದ್ದರು.