Publish Date: Sat, 19 Dec 2020 (16:42 IST)
Updated Date: Sat, 19 Dec 2020 (16:44 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಗೆಲ್ಲಬೇಕಿದ್ದ ಪಂದ್ಯವನ್ನು ಎರಡೂ ಕೈ ಚಾಚಿ ಎದುರಾಳಿ ಕೈಗಿತ್ತು ಟೀಂ ಇಂಡಿಯಾ ಬೇಡದ ದಾಖಲೆಗಳ ಸರಮಾಲೆಯನ್ನು ಹೆಗಲಿಗೇರಿಸಿಕೊಂಡಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ 36 ರನ್ ಗೆ ಆಲೌಟ್ ಆದ ಟೀಂ ಇಂಡಿಯಾ ಈ ಮೂಲಕ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ ಕನಿಷ್ಠ ಮೊತ್ತಕ್ಕೆ ಔಟಾದ ಪಾಕಿಸ್ತಾನದ ಹಿಂದಿನ ದಾಖಲೆಯನ್ನು ಮುರಿದು ಆ ಕುಖ್ಯಾತಿಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ಬಳಿಕ ಸೋಲು ಕಂಡಂತಾಗಿದೆ. 2ಕ್ಕೂ ಅಧಿಕ ಪಂದ್ಯಗಳಿರುವ ಟೆಸ್ಟ್ ಸರಣಿಯಲ್ಲಿ ಏಷ್ಯಾ ಖಂಡದ ಹೊರಗೆ ಆಡಿ ಇದು 35 ನೇ ಬಾರಿಗೆ ಮೊದಲ ಟೆಸ್ಟ್ ಪಂದ್ಯ ಸೋತ ಅವಮಾನಕ್ಕೀಡಾಗಿದೆ.