Publish Date: Sat, 19 Dec 2020 (09:25 IST)
Updated Date: Sat, 19 Dec 2020 (09:27 IST)
ಅಡಿಲೇಡ್: ಬ್ಯಾಟಿಂಗ್ ನಲ್ಲಿ ಪ್ಲಾಪ್ ಶೋ ಕೊಟ್ಟು, ಬಳಿಕ ಫೀಲ್ಡಿಂಗ್ ನಲ್ಲೂ ಕ್ಯಾಚ್ ಡ್ರಾಪ್ ಮಾಡಿದ ಪೃಥ್ವಿ ಶಾ ನೆಟ್ಟಿಗರಿಂದ ಇನ್ನಿಲ್ಲದಂತೆ ಟ್ರೋಲ್ ಆಗಿದ್ದಾರೆ.
ಪೃಥ್ವಿ ಶಾರನ್ನು ತಂಡಕ್ಕೆ ಆಯ್ಕೆ ಮಾಡಿದಾಗಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಮೊದಲ ಇನಿಂಗ್ಸ್ ನಲ್ಲಿ ಅವರು ಶೂನ್ಯ ಸಂಪಾದಿಸಿದ್ದಕ್ಕೆ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ಆಸ್ಟ್ರೇಲಿಯಾದ ಲಬುಶೇನ್ ನೀಡಿದ ಕ್ಯಾಚನ್ನು ಕೈ ಚೆಲ್ಲಿದ ಮೇಲಂತೂ ನೆಟ್ಟಿಗರ ಆಕ್ರೋಶ ಮೇರೆ ಮೀರಿದೆ. ಇದೂ ಸಾಲದೆಂಬಂತೆ ದ್ವಿತೀಯ ಇನಿಂಗ್ಸ್ ನಲ್ಲೂ 4 ರನ್ ಗಳಿಸಿ ಔಟಾಗಿ ಗಾಯದ ಮೇಲೆ ಉಪ್ಪು ಸವರಿಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಪೃಥ್ವಿ ಶಾ ಕ್ಯಾಚ್ ಕೈಬಿಟ್ಟಿದ್ದಕ್ಕೆ ಭಾರತೀಯ ಕ್ರಿಕೆಟಿಗರು ಕ್ರಿಸ್ ಮಸ್ ಮೂಡ್ ನಲ್ಲಿರುವಂತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
Krishnaveni K
Publish Date: Sat, 19 Dec 2020 (09:25 IST)
Updated Date: Sat, 19 Dec 2020 (09:27 IST)