Publish Date: Sat, 19 Dec 2020 (10:14 IST)
Updated Date: Sat, 19 Dec 2020 (10:16 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 19 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಇಂದಿನ ದಿನದಾಟದಲ್ಲಿ ಕೇವಲ 10 ರನ್ ಸೇರಿಸಿರುವ ಟೀಂ ಇಂಡಿಯಾ ಐದು ವಿಕೆಟ್ ಕಳೆದುಕೊಂಡಿದೆ. ಅದೂ ಪ್ರಮುಖ ಬ್ಯಾಟ್ಸ್ ಮನ್ ಗಳೆಲ್ಲಾ ಪೆವಿಲಿಯನ್ ಸೇರಿಯಾಗಿದೆ. ಆಸ್ಟ್ರೇಲಿಯಾದ ಹೇಝಲ್ ವುಡ್, ಪ್ಯಾಟ್ ಕ್ಯುಮಿನ್ಸ್ ಮಿಂಚಿನ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ 30 ರನ್ ಗೇ ಆಲೌಟ್ ಆಗಿ ಹೀನಾಯ ದಾಖಲೆ ಮೈಮೇಲೆಳೆದುಕೊಂಡರೂ ಅಚ್ಚರಿಯಿಲ್ಲ. ಇದ್ದವರಲ್ಲಿ 9 ರನ್ ಗಳಿಸಿದ ಮಯಾಂಕ್ ಅಗರ್ವಾಲ್ ರದ್ದೇ ಗರಿಷ್ಠ ರನ್ ಸಾಧನೆ! ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ‍್ವರ ಪೂಜಾರ, ಅಜಿಂಕ್ಯಾ ರೆಹಾನೆ ಶೂನ್ಯ ಸಾಧನೆಯಾದರೆ ನಾಯಕ ವಿರಾಟ್ ಕೊಹ್ಲಿ ಕೇವಲ ಒಂದು ಬೌಂಡರಿಗೇ ಇನಿಂಗ್ಸ್ ಮುಗಿಸಿದ್ದಾರೆ. ಮೊದಲ ಇನಿಂಗ್ಸ್ ಮುನ್ನಡೆ ಸೇರಿ ಭಾರತ ಸದ್ಯಕ್ಕೆ ಒಟ್ಟು 72 ರನ್ ಗಳ ಮುನ್ನಡೆಯಲ್ಲಿದೆ.
Krishnaveni K
Publish Date: Sat, 19 Dec 2020 (10:14 IST)
Updated Date: Sat, 19 Dec 2020 (10:16 IST)