Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಟಕ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆ ನಡೆಯಲಿರುವ ದ್ವಿತೀಯ ಟಿ20 ಪಂದ್ಯವಾಡಲು ಟೀಂ ಇಂಡಿಯಾ ಮತ್ತು ಆಫ್ರಿಕಾ ಕ್ರಿಕೆಟಿಗರು ನಿನ್ನೆ ಕಟಕ್ ಗೆ ಬಂದಿಳಿದಿದ್ದಾರೆ.
ರಿಷಬ್ ಪಂತ್ ಪಡೆ ಕಟಕ್ ಗೆ ಬಂದಿಳಿಯುತ್ತಿದ್ದಂತೇ ಭರ್ಜರಿ ಸ್ವಾಗತ ಸಿಕ್ಕಿದೆ. ಮೊದಲ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ನಾಳೆ ಗೆಲ್ಲುವ ಭರವಸೆಯಿದೆ.
ಇಂದಿನಿಂದ ಕ್ರಿಕೆಟಿಗರು ಅಭ್ಯಾಸಕ್ಕೆ ಇಳಿಯುವ ನಿರೀಕ್ಷೆಯಿದೆ. ಈ ಪಂದ್ಯಕ್ಕೆ ಭಾರತ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ‍್ಯತೆಯಿದೆ.