Publish Date: Sat, 12 Dec 2020 (10:42 IST)
Updated Date: Sat, 12 Dec 2020 (10:43 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಅಭ್ಯಾಸ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಹೃದಯವಂತಿಕೆಗೆ ಆಸ್ಟ್ರೇಲಿಯಾ ಅಭಿಮಾನಿಗಳು ಫಿದಾ ಆಗಿದ್ದಾರೆ.
ನಿನ್ನೆ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯಾ ಕ್ಷೇತ್ರರಕ್ಷಕ ಕ್ಯಾಮರೂನ್ ಗ್ರೀನ್ ತಲೆಗೆ ಚೆಂಡು ಬಡಿದು ಕುಸಿದು ಬಿದ್ದರು. ಈ ವೇಳೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಬ್ಯಾಟ್ ಹಿಡಿದು ನಿಂತಿದ್ದ ಸಿರಾಜ್ ಬ್ಯಾಟ್ ಬಿಸಾಕಿ ಓಡಿ ಗ್ರೀನ್ ರನ್ನು ಹಿಡಿದೆತ್ತಲು ಸಹಾಯ ಮಾಡಿದ್ದಲ್ಲದೆ, ಯೋಗ ಕ್ಷೇಮ ವಿಚಾರಿಸಿದರು. ಅವರ ಈ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.