Publish Date: Sat, 12 Dec 2020 (10:00 IST)
Updated Date: Sat, 12 Dec 2020 (10:01 IST)
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯೇತರ ಆದರೆ ಆಸ್ಟ್ರೇಲಿಯಾ ಆಟಗಾರರ ಸ್ವಭಾವ ಹೊಂದಿರುವ ಆಟಗಾರ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ಹಲವು ಭಾರತೀಯ ಕ್ರಿಕೆಟಿಗರು ತಮ್ಮ ಎದುರಾಳಿಗಳ ವಿರುದ್ಧ ಗಾಂಧೀವಾದಿಗಳಂತೆ ಆಟವಾಡುತ್ತಿದ್ದರು. ಸೌರವ್ ಗಂಗೂಲಿ ಈ ಸ್ವಭಾವವನ್ನು ಬದಲಿಸಿ ಆಕ್ರಮಣಕಾರಿ ಮನೋಭಾವ ತರಲು ಯತ್ನಿಸಿದ ಮೊದಲ ನಾಯಕ. ಕೊಹ್ಲಿ ಎಲ್ಲರಿಗಿಂತ ಭಿನ್ನ. ಅವರು ಮೆತ್ತಗಿರುವುದನ್ನು ಇಷ್ಟಪಡುವುದೇ ಇಲ್ಲ. ಎದುರಾಳಿಗಳ ಜತೆ ಆಸ್ಟ್ರೇಲಿಯನ್ನರಂತೆ ಆಕ್ರಮಣಕಾರಿಯಾಗಿರುತ್ತಾರೆ ಎಂದು ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.