ಲಂಡನ್: ಐರ್ಲೆಂಡ್ ವಿರುದ್ಧ ನಿನ್ನೆ ನಡೆದ ಟಿ20 ಸರಣಿಯ ಮೊದಲ ಪಂದ್ಯ ಟೀಂ ಇಂಡಿಯಾ ಪಾಲಿಗೆ ವಿಶೇಷವಾಗಿತ್ತು. ಅದಕ್ಕೆ ಕಾರಣವೇನು ಗೊತ್ತಾ?
ಈಗಾಗಲೇ ಏಕದಿನ, ಟೆಸ್ಟ್ ಕ್ರಿಕೆಟ್ ನಲ್ಲಿ ಹಲವಾರು ದಾಖಲೆ ಮಾಡಿರುವ ಟೀಂ ಇಂಡಿಯಾ ಇದೀಗ ಟಿ20 ಮಾದರಿಯಲ್ಲಿ 100 ನೇ ಪಂದ್ಯವಾಡಿದ ಕೀರ್ತಿಗೆ ಪಾತ್ರವಾಯಿತು. ಇದರೊಂದಿಗೆ ಶತಕ ಟಿ20 ಪಂದ್ಯಗಳ ಸಾಧನೆ ಮಾಡಿದ ಏಳನೇ ರಾಷ್ಟ್ರವೆಂಬ ಹೆಗ್ಗಳಿಕೆ ಟೀಂ ಇಂಡಿಯಾ ಪಾತ್ರವಾಯಿತು.
128 ಪಂದ್ಯಗಳಾಡಿರುವ ಪಾಕಿಸ್ತಾನ ಟಿ20 ಮಾದರಿಯಲ್ಲಿ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಹೊಂದಿದೆ. ಅದರ ಬಳಿಕ ನ್ಯೂಜಿಲೆಂಡ್, ಶ್ರೀಲಂಕಾ, ದ.ಆಫ್ರಿಕಾ ತಂಡ ನಂತರದ ಸ್ಥಾನಗಳಲ್ಲಿವೆ. ವಿಶೇಷವೆಂದರೆ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದು ದೆಹಲಿಯವರೇ ಆಗಿದ್ದ ವೀರೇಂದ್ರ ಸೆಹ್ವಾಗ್. ಇದೀಗ ದೆಹಲಿ ಮೂಲದವರೇ ಆಗಿರುವ ಕೊಹ್ಲಿ 100 ನೇ ಪಂದ್ಯದ ನಾಯಕರಾಗಿದ್ದಿದ್ದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.