Publish Date: Thu, 28 Jun 2018 (09:03 IST)
Updated Date: Thu, 28 Jun 2018 (09:04 IST)
ಲಂಡನ್: ಅಂಡರ್ 19 ತಂಡಕ್ಕೆ ಆಯ್ಕೆಯಾಗಿರುವ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಟೀಂ ಇಂಡಿಯಾ ಆಟಗಾರರಿಗೆ ಐರ್ಲೆಂಡ್ ನಲ್ಲಿ ನೆಟ್ ನಲ್ಲಿ ಬೌಲಿಂಗ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.
ಆದರೆ ಆ ವಿಚಾರವೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಚಿನ್ ಪುತ್ರನಿಗೆ ಟೀಂ ಇಂಡಿಯಾ ಆಟಗಾರರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದಷ್ಟೇ ಅಲ್ಲ, ಕೋಚ್ ರವಿಶಾಸ್ತ್ರಿಯಿಂದ ಟಿಪ್ಸ್ ಕೂಡಾ ಸಿಕ್ಕಿತ್ತು. ಈ ಫೋಟೋವನ್ನು ಬಿಸಿಸಿಐ ಟ್ವಿಟರ್ ನಲ್ಲಿ ಪ್ರಕಟಿಸಿದ್ದಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಅಂಡರ್ 19 ತಂಡದಲ್ಲಿ ಅರ್ಜುನ್ ಹೊರತಾಗಿ ಬೇರೆ ಆಟಗಾರರು ಇದ್ದರು. ಅವರಿಗೂ ಯಾಕೆ ಈ ಅವಕಾಶ ನೀಡಲಿಲ್ಲ? ಕೇವಲ ಸಚಿನ್ ಪುತ್ರನಿಗೆ ಮಾತ್ರ ಯಾಕೆ ಸುವರ್ಣಾವಕಾಶ ನೀಡಲಾಯಿತು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ವಂಶಪಾರಂಪರ್ಯ ಎನ್ನುವುದು ಭಾರತೀಯ ಕ್ರಿಕೆಟ್ ಗೂ ಕಾಲಿಟ್ಟಿತೇ ಎಂದು ಕೆಲವರು ಖಾರವಾಗಿ ಪ್ರಶ್ನಿಸಿದ್ದಾರೆ. ಹಿಂದೊಮ್ಮೆ ಸಚಿನ್ ಪುತ್ರನನ್ನು ಬಿಸಿಸಿಐ ತನ್ನ ಕಿರಿಯರ ತಂಡಕ್ಕೆ ಆಯ್ಕೆ ಮಾಡಿದಾಗ ಸಚಿನ್ ಪುತ್ರ ಎಂಬ ಕಾರಣಕ್ಕೆ ಆತನಿಗೆ ಅವಕಾಶ ನೀಡಲಾಗಿದೆ ಎಂದು ವಿವಾದವೆದ್ದಿತ್ತು. ಇದೀಗ ಮತ್ತೆ ಅಂತಹದ್ದೇ ವಿವಾದ ಸೃಷ್ಟಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.