Publish Date: Thu, 28 Jun 2018 (08:53 IST)
Updated Date: Thu, 28 Jun 2018 (08:55 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾಖಲೆ ಬರೆಯುವ ಅವಕಾಶವೊಂದು ಒದಗಿ ಬಂದಿತ್ತು. ಆದರೆ ಶೂನ್ಯಕ್ಕೆ ಔಟಾಗುವ ಮೂಲಕ ಅದನ್ನು ತಪ್ಪಿಸಿಕೊಂಡರು.
ಟಿ20 ಕ್ರಿಕೆಟ್ ನಲ್ಲಿ ಅತೀ ವೇಗದ 2000 ರನ್ ಗಳಿಸಿದ ದಾಖಲೆ ಸದ್ಯಕ್ಕೆ ಬ್ರೆಂಡನ್ ಮೆಕಲಂ ಹೆಸರಿನಲ್ಲಿದೆ. ಅವರು 66 ಇನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದರು. ಇದೀಗ 54 ನೇ ಇನಿಂಗ್ಸ್ ಆಡಿದ್ದ ಕೊಹ್ಲಿಗೆ ಆ ದಾಖಲೆ ಮುರಿಯಲು 17 ರನ್ ಬೇಕಾಗಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿನ್ನೆಯೇ ಆಗಬೇಕಿದ್ದ ದಾಖಲೆ ತಪ್ಪಿಹೋಯ್ತು.
ಆದರೇನಂತೆ? ಕೊಹ್ಲಿಗೆ ಮುಂದಿನ ಪಂದ್ಯದಲ್ಲೂ ಆ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಕೊಹ್ಲಿ ಅವಕಾಶ ಸಿಗಬೇಕಷ್ಟೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.