Publish Date: Sat, 10 Jul 2021 (10:24 IST)
Updated Date: Sat, 10 Jul 2021 (10:09 IST)
ಕೊಲೊಂಬೋ: ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾಗೆ ಈಗ ಕೊರೋನಾ ಭೀತಿ ತಗುಲಿದೆ. ಹೀಗಾಗಿ ಕ್ರಿಕೆಟಿಗರಿಗೆ ಈಗ ಹೋಟೆಲ್ ಕೊಠಡಿಯೇ ಜೈಲಾಗಿದೆ.
ಮೂರು ದಿನಗಳ ಕ್ವಾರಂಟೈನ್ ಬಳಿಕ ತರಬೇತಿಗೆ ಮೈದಾನಕ್ಕಿಳಿದಿದ್ದ ಕ್ರಿಕೆಟಿಗರಿಗೆ ಕೊರೋನಾ ಬಿಸಿ ತಟ್ಟಿದೆ. ಲಂಕಾ ತಂಡದಲ್ಲಿ ಕೊರೋನಾ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಟೀಂ ಇಂಡಿಯಾವನ್ನೂ ಬಿಗಿ ಕ್ವಾರಂಟೈನ್ ಗೊಳಪಡಿಸಲಾಗಿದೆ.
ಹೀಗಾಗಿ ಕ್ರಿಕೆಟಿಗರಿಗೆ ತಾವು ಉಳಿದುಕೊಂಡ ಹೋಟೆಲ್ ಕೊಠಡಿಗಳಲ್ಲೇ ನಿರ್ಬಂಧ ವಿಧಿಸಲಾಗಿದೆ. ಹೊರಾಂಗಣ ಅಭ್ಯಾಸಕ್ಕೂ ಸದ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಜುಲೈ 17 ರಿಂದ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಸರಣಿ ಆರಂಭವಾಗಲಿದೆ.