Publish Date: Fri, 09 Jul 2021 (10:46 IST)
Updated Date: Fri, 09 Jul 2021 (10:04 IST)
ಮುಂಬೈ: ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾಗೆ ನಾಯಕ ಯಾರಾಗಬೇಕು ಎಂಬ ಪ್ರಶ್ನೆಗೆ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಕೊಹ್ಲಿ ಬಳಿಕ ಟೀಂ ಇಂಡಿಯಾವನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಮುನ್ನಡೆಸಬೇಕು ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.
ರಿಷಬ್ ರಲ್ಲಿ ಆ ಸಾಮರ್ಥ್ಯವಿರುವುದನ್ನು ನೋಡಿದ್ದೇನೆ.ಯಾಕೆಂದರೆ ಅವರು ಲವಲವಿಕೆಯಿಂದಿರುತ್ತಾರೆ, ಎಲ್ಲರೊಂದಿಗೆ ಮಾತನಾಡುತ್ತಿರುತ್ತಾರೆ. ಡೆಲ್ಲಿ ಪರವಾಗಿ ಐಪಿಎಲ್ ನಲ್ಲಿ ನಾಯಕನಾಗಿದ್ದಾಗ ಅವರಲ್ಲಿ ಬುದ್ಧಿವಂತಿಕೆ ಇರುವುದನ್ನೂ ನೋಡಿದ್ದೇನೆ. ಹೀಗಾಗಿ ಅವರನ್ನು ಭವಿಷ್ಯದ ನಾಯಕನಾಗಿ ಪರಿಗಣಿಸಬೇಕು ಎಂದು ಯುವಿ ಹೇಳಿದ್ದಾರೆ.