Publish Date: Fri, 09 Jul 2021 (11:39 IST)
Updated Date: Fri, 09 Jul 2021 (09:51 IST)
ಲಂಡನ್: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಜೊತೆಗೆ ಮಯಾಂಕ್ ಅಗರ್ವಾಲ್ ಓಪನರ್ ಆಗಿ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ.
ಗಾಯಗೊಂಡ ಶುಬ್ನಂ ಗಿಲ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿದೆ. ಹೀಗಾಗಿ ಲಭ್ಯವಿರುವ ಆಟಗಾರರ ಪೈಕಿ ಮಯಾಂಕ್ ಗೆ ಓಪನರ್ ಆಗಿ ಅನುಭವವಿದೆ. ಹೀಗಾಗಿ ಅವರನ್ನೇ ಬಳಸಿಕೊಳ್ಳಲಿದೆ.
ಒಂದು ವೇಳೆ ಕೆಎಲ್ ರಾಹುಲ್ ಗೆ ಅವಕಾಶ ಸಿಗುವುದಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಆದರೆ ಅವರಿಗಾಗಿ ಚೇತೇಶ್ವರ ಪೂಜಾರ ಅಥವಾ ಅಜಿಂಕ್ಯಾ ರೆಹಾನೆಯನ್ನು ಕೈ ಬಿಡಬೇಕಾಗಬಹುದು.