Publish Date: Sun, 02 Oct 2022 (20:57 IST)
Updated Date: Sun, 02 Oct 2022 (21:00 IST)
ಗುವಾಹಟಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ಇಂದಿನಿ ಟಿ20 ಪಂದ್ಯ ಭರ್ಜರಿ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 237 ರನ್ ಗಳಿಸಿದೆ.
ಭಾರತದ ಓಪನಿಂಗ್ ಜೋಡಿ ಭದ್ರ ಆರಂಭ ಒದಗಿಸಿತು. ರೋಹಿತ್ ಶರ್ಮಾ 43 ರನ್ ಗಳಿಸಿ ಮೊದಲನೆಯವರಾಗಿ ಔಟಾದರೆ 28 ಎಸೆತಗಳಲ್ಲಿ 57 ರನ್ ಸಿಡಿಸಿದ ರಾಹುಲ್ ಫಾರ್ಮ್ ಪ್ರದರ್ಶಿಸಿದರು. ಬಳಿಕ ವಿರಾಟ್ ಕೊಹ್ಲಿ ಎಂದಿನಂತೆ ಸಾರಥಿಯಾದರು. 49 ರನ್ ಗಳಿಸಿದ ಅವರು ಅಜೇಯರಾಗುಳಿದರು.
ಆದರೆ ಭಾರತದ ದಾಖಲೆಯ ಮೊತ್ತ ಪೇರಿಸಲು ಸಾಧ್ಯವಾಗಿದ್ದು ಸೂರ್ಯಕುಮಾರ್ ಅಬ್ಬರದಿಂದ. ಕೇವಲ 22 ಎಸೆತಗಳಿಂದ 61 ರನ್ ಚಚ್ಚಿದ ಸೂರ್ಯ ಮತ್ತೆ ತಮ್ಮ ಪ್ರಚಂಡ ಫಾರ್ಮ್ ಪ್ರದರ್ಶಿಸಿದರು. ಕೊನೆಯಲ್ಲಿ ಬಂದ ದಿನೇಶ್ ಕಾರ್ತಿಕ್ 2 ಸಿಕ್ಸರ್ ಸಹಿತ 17 ರನ್ ಗಳಿಸಿ ಅಜೇಯರಾಗುಳಿದರು.
-Edited by Rajesh Patil