ಗುವಾಹಟಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಸ್ಸಾಂ ಪೊಲೀಸ್ ವರಿಷ್ಠಾಧಿಕಾರಿ ಪೂಂಜಿತ್ ಡೊವಾರಾ ಜೊತೆ ತೆಗೆಸಿಕೊಂಡಿರುವ ಫೋಟೋ ಈಗ ನೆಟ್ಟಿಗರನ್ನು ಕನ್ ಫ್ಯೂಸ್ ಮಾಡಿದೆ.
ಸ್ವತಃ ಪೂಂಜಿತ್ ಅವರೇ ರೋಹಿತ್ ಜೊತೆಗಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. ಗುವಾಹಟಿಗೆ ಎರಡನೇ ಟಿ20 ಪಂದ್ಯವಾಡಲು ಬಂದಿದ್ದ ರೋಹಿತ್ ಜೊತೆಗೆ ಅಭಿಮಾನಿಯಾಗಿ ಪೂಂಜಿತ್ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದರು.
ಆದರೆ ಈ ಫೋಟೋದಲ್ಲಿ ಪೂಂಜಿತ್ ಮತ್ತು ರೋಹಿತ್ ಪೋಸ್ ನೀಡಿದ ಸ್ಟೈಲ್ ನೋಡಿ ರೋಹಿತ್ ರನ್ನು ಪೂಂಜಿತ್ ಅರೆಸ್ಟ್ ಮಾಡಿದ ರೀತಿಯಿದೆ. ಹೀಗಾಗಿ ನೆಟ್ಟಿಗರು ರೋಹಿತ್ ಶರ್ಮಾರನ್ನು ಅರೆಸ್ಟ್ ಮಾಡಿದ್ದೀರಾ ಎಂದು ಟ್ರೋಲ್ ಮಾಡಿದ್ದಾರೆ.
-Edited by Rajesh Patil