Publish Date: Sunday, 02 October 2022 (09:00 IST)
Updated Date: Sunday, 02 October 2022 (09:20 IST)
ಗುವಾಹಟಿ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯ ಇಂದು ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಕಣಕ್ಕಿಳಿಯಬಹುದೇ ಎಂಬ ಕುತೂಲಹ ಅಭಿಮಾನಿಗಳಲ್ಲಿದೆ.
ರಾಹುಲ್ ಆರಂಭಿಕರಾಗಿ ತೋರುತ್ತಿರುವ ಪ್ರದರ್ಶನ ಎಲ್ಲರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಪ್ರಯೋಗಾರ್ಥವಾಗಿ ಕೊಹ್ಲಿ ಕಣಕ್ಕಿಳಿಯಲೂ ಬಹುದು.
ಇದಲ್ಲದೆ, ಬೌಲಿಂಗ್ ನಲ್ಲಿ ಯಾವುದೇ ಬದಲಾವಣೆಯಾಗದು. ಅರ್ಷ್ ದೀಪ್, ದೀಪಕ್ ಚಹರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರೇ ಮುಂದುವರಿಯುವ ಸಾಧ್ಯತೆ ಹೆಚ್ಚು. ಉಳಿದಂತೆ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ.
-Edited by Rajesh Patil