Publish Date: Wed, 07 Jul 2021 (10:44 IST)
Updated Date: Wed, 07 Jul 2021 (10:45 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಎರಡನೇ ಕೊರೋನಾ ಲಸಿಕೆ ಡೋಸ್ ಅಲ್ಲಿಯೇ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ವಿಶ್ವ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳುವ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರು ಭಾರತದಲ್ಲೇ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರು.
ಇದೀಗ ಎರಡನೇ ಡೋಸ್ ಪಡೆದುಕೊಳ್ಳಲು ಸಮಯವಾಗುತ್ತಿದ್ದು, ಅಷ್ಟರಲ್ಲಿ ಭಾರತಕ್ಕೆ ಬರುವುದು ಅಸಾಧ್ಯ. ಹೀಗಾಗಿ ಇಂದು ಮತ್ತು ನಾಳೆಯಾಗಿ ಎರಡನೇ ಡೋಸ್ ಲಸಿಕೆ ಇಂಗ್ಲೆಂಡ್ ನಲ್ಲಿಯೇ ಪಡೆದುಕೊಳ್ಳಲಿದ್ದಾರೆ.